ಪಾಕ್ ಸೇನಾ ಮುಖ್ಯಸ್ಥರೊಂದಿಗೆ ಸಂಬಂಧ ಹಳಸಿತ್ತು: ಒಪ್ಪಿಕೊಂಡ ಇಮ್ರಾನ್ ಖಾನ್
Update: 2022-11-10 22:58 IST
ಇಸ್ಲಮಾಬಾದ್, ನ.10: ತಾನು ಪ್ರಧಾನಿಯಾಗಿದ್ದ ಸೇನಾ ಮುಖ್ಯಸ್ಥ ಜನರಲ್ ಖಮರ್ ಜಾವೆದ್ ಬಾಜ್ವ(Qamar Javed Bajwa) ಜತೆಗಿನ ಸಂಬಂಧ ಹಳಸಿತ್ತು ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಒಪ್ಪಿಕೊಂಡಿದ್ದಾರೆ.
ಸೇನೆಯು ಅತ್ಯಂತ ಶಕ್ತಿಯುತ ಮತ್ತು ಸಂಘಟಿತವಾಗಿರುವುದರಿಂದ, ದೇಶದಲ್ಲಿ ಕಾನೂನು ಸುವ್ಯವಸ್ಥೆ ಸ್ಥಾಪಿಸಲು ನಾನು ಪ್ರಯತ್ನಿಸಿದಾಗ ಸೇನೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಭಾವಿಸಿದ್ದೆ. ಆದರೆ ಹಾಗೆ ಆಗಲಿಲ್ಲ. ಭ್ರಷ್ಟಾಚಾರಿಗಳಿಗೆ ಶಿಕ್ಷೆ ವಿಧಿಸುವಲ್ಲಿ ತನ್ನ ಸರಕಾರದ ವೈಫಲ್ಯತೆ ಸೇನೆಯ ಜತೆಗಿನ ಸಂಬಂಧ ಹಳಸಿರುವುದಕ್ಕೆ ಮೊದಲ ಸಂಕೇತವಾಗಿದೆ.
ಎರಡನೆಯದು, ಪಂಜಾಬ್ ಪ್ರಾಂತದ ಮುಖ್ಯಮಂತ್ರಿ ಆಯ್ಕೆಯ ವಿಷಯ. ಅಲೀಮ್ ಖಾನ್(Aleem Khan) ಮುಖ್ಯಮಂತ್ರಿಯಾಗಬೇಕು ಎಂದು ಸೇನೆ ಒತ್ತಡ ಹೇರಿತ್ತು. ಆದರೆ ಓರ್ವ ಭ್ರಷ್ಟಾಚಾರಿಯನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲು ನಾನು ಒಪ್ಪಲಿಲ್ಲ' ಎಂದು ಇಮ್ರಾನ್ಖಾನ್ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.