ಮರಾಠಿ ಚಿತ್ರ ಪ್ರದರ್ಶನ ನಿಲ್ಲಿಸಿದ್ದ ಎನ್ಸಿಪಿ ನಾಯಕನ ಬಂಧನ

Update: 2022-11-11 14:02 GMT

ಮುಂಬೈ,ನ.11: ನೆರೆಯ ಥಾಣೆಯಲ್ಲಿ ಮರಾಠಿ ಚಿತ್ರವೊಂದರ ಪ್ರದರ್ಶನವನ್ನು ನಿಲ್ಲಿಸಿದ್ದಕ್ಕಾಗಿ ಮತ್ತು ವೀಕ್ಷಕರನ್ನು ಥಳಿಸಿದ್ದಕ್ಕಾಗಿ ಎನ್ಸಿಪಿ ನಾಯಕ ಹಾಗೂ ಮಾಜಿ ಮಹಾರಾಷ್ಟ್ರ ಸಚಿವ ಜಿತೇಂದ್ರ ಅವ್ಹಾಡ್(Jitendra Awad) ಅವರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.

ಸೋಮವಾರ ರಾತ್ರಿ ಈ ಘಟನೆ ನಡೆದಿತ್ತು. ಥಾಣೆ ನಗರದಲ್ಲಿಯ ಮಲ್ಟಿಪ್ಲೆಕ್ಸ್ ನ ಗೇಟ್ ಗಳನ್ನು ಮುರಿದು ಒಳನುಗ್ಗಿದ್ದ ಅವ್ಹಾಡ್ ಮತ್ತು ಅವರ ಬೆಂಬಲಿಗರು ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿ ‘ಹರ ಹರ ಮಹಾದೇವ ’(Hara Hara Mahadev)ಚಿತ್ರದ ಪ್ರದರ್ಶನಕ್ಕೆ ವ್ಯತ್ಯಯವುಂಟು ಮಾಡಿದ್ದರು.

‘ಹರ ಹರ ಮಹಾದೇವ’ ಚಿತ್ರವನ್ನು ವೀಕ್ಷಿಸುತ್ತಿದ್ದವರನ್ನು ಥಳಿಸಿದ್ದು ಸಹಿಸಲು ಸಾಧ್ಯವಿಲ್ಲ  ಮತ್ತು ಘಟನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮಂಗಳವಾರ ಹೇಳಿದ್ದ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು,ಜನರಿಗೆ ಪ್ರಜಾಸತ್ತಾತ್ಮಕವಾಗಿ ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಅನುಮತಿಯಿದೆ. ಚಿತ್ರವನ್ನು ತಾನು ನೋಡಿಲ್ಲ ಮತ್ತು ವಿವಾದದ ಬಗ್ಗೆ ತನಗೆ ಗೊತ್ತಿಲ್ಲ ಎಂದಿದ್ದರು.

Similar News