ಕಲ್ಲಡ್ಕ : "ಲರ್ನ್ ದಿ ಕುರ್ ಆನ್" ಪುಸ್ತಕ ಬಿಡುಗಡೆ

Update: 2022-11-12 17:19 GMT

ವಿಟ್ಲ : ಕುರ್ ಆನ್ ಕಲಿಯಿರಿ ಮತ್ತು ಪರೀಕ್ಷಾ ಯೋಜನೆಯ "ಲರ್ನ್ ದಿ ಕುರ್ ಆನ್" 11ಪೇ ಹಂತದ ಪುಸ್ತಕ ಬಿಡುಗಡೆಯು ಕಲ್ಲಡ್ಕದ ಬಿರೂಲ್ ವಾಲಿದೈನ್ ಜುಮಾ ಮಸೀದಿಯಲ್ಲಿ ಶುಕ್ರವಾರ ನಡೆಯಿತು.

ಮಸೀದಿ ಅಧ್ಯಕ್ಷ ಅಬ್ದುಲ್ ರಝಾಕ್ ಹಾಜಿ ಗೋಳ್ತಮಜಲು ಅವರು ಪುಸ್ತಕದ ಪ್ರಥಮ ಪ್ರತಿಯನ್ನು ಉದ್ಯಮಿ ಅಹ್ಮದ್ ಖಾನ್ ಕೊಡಾಜೆ ಅವರಿಗೆ ಹಸ್ತಾಂತರಿಸುವ ಮೂಲಕ ಬಿಡುಗಡೆ ಗೊಳಿಸಿದರು.

ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಇದರ ಅಧೀನ ಸಂಸ್ಥೆಗಳಾದ  ಸಲಫಿ ಗರ್ಲ್ಸ್ ಆಂಡ್ ವಿಮೆನ್ಸ್  ಮೂವ್ ಮೆಂಟ್, ಸಲಫಿ ಎಜ್ಯುಕೇಶನ್ ಬೋರ್ಡ್ ಮಂಗಳೂರು, ಕರ್ನಾಟಕ ಸಲಫಿ ಫೌಂಡೇಶನ್ ರಿಯಾದ್, ಮುಜಾಹಿದ್ ಗರ್ಲ್ಸ್ ಮೂವ್ ಮೆಂಟ್ ಕನ್ನಡ ವಿಭಾಗ ರಿಯಾದ್, ಸೌತ್ ಕರ್ನಾಟಕ ಸಲಫಿ ಮೂವ್ ಮೆಂಟ್ ಯೂತ್ ವಿಂಗ್ ಇವುಗಳ ಸಂಯೋಜಕತ್ವದಲ್ಲಿ ಈ ಪುಸ್ತಕವನ್ನು ರಚಿಸಲಾಗಿದೆ.

Similar News