ಲಖಿಮ್ ಪುರಖೇರಿ ಹಿಂಸಾಚಾರ ಪ್ರಕರಣ: ಮಿಶ್ರಾ ಜಾಮೀನು ಅರ್ಜಿ ಇನ್ನೊಂದು ಪೀಠಕ್ಕೆ ವರ್ಗಾವಣೆ

Update: 2022-11-12 18:23 GMT

ಹೊಸದಿಲ್ಲಿ, ನ. 12: ಲಖಿಮ್ ಪುರಖೇರಿ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜಾಮೀನು ಕೋರಿ ಕೇಂದ್ರ ಸಚಿವ ಅಜಯ್ ಮಿಶ್ರಾ ಮಗ ಆಶಿಶ್ ಮಿಶ್ರಾಸಲ್ಲಿಸಿರುವ ಅರ್ಜಿಯನ್ನು, ಪ್ರಕರಣವನ್ನು ಮೊದಲು ವಿಚಾರಣೆ ಮಾಡಿದ್ದ ನ್ಯಾಯಾಧೀಶರನ್ನು ಒಳಗೊಂಡ ಪೀಠಕ್ಕೆ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ನ ಇನ್ನೊಂದು ಪೀಠ ಶುಕ್ರವಾರ ನಿರ್ದೇಶಿಸಿದೆ.

ಈ ಪ್ರಕರಣವನ್ನು ಸೂಕ್ತ ಪೀಠಕ್ಕೆ ವರ್ಗಾಯಿಸುವುದಕ್ಕಾಗಿ ಮುಖ್ಯ ನ್ಯಾಯಾಧೀಶರಿಂದ ಆದೇಶ ಪಡೆದುಕೊಳ್ಳುವಂತೆ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿಮತ್ತು ಬಿ.ವಿ. ನಾಗರತ್ನಾ ಅವರನ್ನೊಳಗೊಂಡ ಪೀಠವು ಸುಪ್ರೀಂ ಕೋರ್ಟ್ನ ನೊಂದಣಿ ವಿಭಾಗ (ರಿಜಿಸ್ಟ್ರಿ)ಕ್ಕೆಸೂಚಿಸಿದೆ.

‘‘ಈ ಪ್ರಕರಣದ ವಿಚಾರಣೆಯನ್ನು ಮೊದಲುಮಾಡಿದ್ದ ನ್ಯಾಯಾಧೀಶರ ಪೈಕಿ ಒಬ್ಬರನ್ನಾದರೂಒಳಗೊಂಡಿರುವ ಪೀಠಕ್ಕೆ ಪ್ರಸಕ್ತ ಪ್ರಕರಣವನ್ನು ವರ್ಗಾಯಿಸುವುದು ನ್ಯಾಯತತ್ವದ ದೃಷ್ಟಿಯಿಂದಅಗತ್ಯವಾಗಿದೆ’’ ಎಂದು ಸುಪ್ರೀಂ ಕೋರ್ಟ್ ಪೀಠ ಹೇಳಿತು.

ಎಪ್ರಿಲ್ 18ರಂದು, ಅಂದಿನ ಮುಖ್ಯ ನ್ಯಾಯಾಧೀಶ ಎನ್.ವಿ. ರಮಣ ಹಾಗೂ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ನ್ಯಾಯಪೀಠವೊಂದು ಆಶಿಶ್ ಮಿಶ್ರಾನಿಗೆ ನೀಡಲಾಗಿದ್ದ ಜಾಮೀನನ್ನು ರದ್ದುಪಡಿಸಿತ್ತು ಹಾಗೂಒಂದು ವಾರದಲ್ಲಿ ಶರಣಾಗುವಂತೆಸೂಚಿಸಿತ್ತು. ಆಶಿಶ್ ಮಿಶ್ರಾ ಜಾಮೀನಿನಲ್ಲಿ ಹೊರಗಿರುವುದರಿಂದ ಅಲಹಾಬಾದ್ ಹೈಕೋರ್ಟ್ನಲ್ಲಿ ‘ಸಂತ್ರಸ್ತ’ರಿಗೆ ‘ನ್ಯಾಯೋಚಿತಮತ್ತು ಪರಿಣಾಮಕಾರಿ’ ವಿಚಾರಣೆ ನಿರಾಕರಿಸಲ್ಪಟ್ಟಿದೆ ಎಂದುಅಂದು ಸುಪ್ರೀಂ ಕೋರ್ಟ್ ಹೇಳಿತ್ತು. ನ್ಯಾ. ರಮಣ ಈಗ ನಿವೃತ್ತರಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದ ವಾಸ್ತವಾಂಶಗಳು ಹಾಗೂ ಸಂತ್ರಸ್ತರಿಗೆ ತಮ್ಮ ಅನಿಸಿಕೆಗಳನ್ನು ಹೇಳಲು ಸಂಪೂರ್ಣ ಅವಕಾಶವನ್ನು ನೀಡಲಾಗಿಲ್ಲ ಎಂಬ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ನ್ಯಾಯೋಚಿತವಾಗಿ, ನಿಷ್ಪಕ್ಷವಾಗಿ ಮತ್ತು ಭಾವನಾತ್ಮಕವಾಗಿ ತೊಡಗಿಕೊಳ್ಳದೆ ನ್ಯಾಯಾಂಗದ ಸ್ವೀಕೃತಮಾನದಂಡಗಳ ಆಧಾರದಲ್ಲಿ ಮೂರು ತಿಂಗಳಲ್ಲಿ ಹೊಸದಾಗಿ ವಿಚಾರಣೆ ನಡೆಸುವಂತೆಹೈಕೋರ್ಟ್ಗೆಸೂಚಿಸಿತ್ತು.

ಬಳಿಕ, ಜುಲೈ 26ರಂದು ಅಲಹಾಬಾದ್ನ ಲಕ್ನೋ ಪೀಠವು ಮಿಶ್ರಾನ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.

Similar News