ವಿಶ್ವ ಪ್ರಸಿದ್ಧ ಇಂಗ್ಲಿಷ್ ಫುಟ್ಬಾಲ್ ಕ್ಲಬ್ ಲಿವರ್‌ಪೂಲ್ ಖರೀದಿಗೆ ಮುಕೇಶ್ ಅಂಬಾನಿ ಬಿಡ್: ವರದಿ

Update: 2022-11-13 14:17 GMT

ಹೊಸದಿಲ್ಲಿ: ಭಾರತದ ಬಿಲಿಯನೇರ್ ಮುಖೇಶ್ ಅಂಬಾನಿ ಅವರು ವಿಶ್ವ ಪ್ರಸಿದ್ಧ ಇಂಗ್ಲಿಷ್ ಫುಟ್ಬಾಲ್ ಕ್ಲಬ್ ಲಿವರ್‌ಪೂಲ್ ಫುಟ್ಬಾಲ್  ಸ್ವಾಧೀನಕ್ಕೆ ಬಿಡ್ ಮಾಡಲು ಸ್ಪರ್ಧೆಗೆ ಪ್ರವೇಶಿಸಿದ್ದಾರೆ ಎಂದು ಪ್ರಮುಖ ಇಂಗ್ಲಿಷ್ ದಿನಪತ್ರಿಕೆ ವರದಿ ಮಾಡಿದೆ.

 ಇಂಗ್ಲಿಷ್ ಪ್ರೀಮಿಯರ್ ಲೀಗ್  ಅನ್ನು  ಅದರ ಹಾಲಿ ಮಾಲೀಕರಾದ ಫೆನ್ವೇ ಸ್ಪೋರ್ಟ್ಸ್ ಗ್ರೂಪ್ (FSG) ಮಾರಾಟಕ್ಕೆ ಇರಿಸಿದೆ.

'ದಿ ಮಿರರ್' ಪ್ರಕಾರ, FSG ಲಿವರ್‌ಪೂಲ್ ಫುಟ್ಬಾಲ್ ಕ್ಲಬ್ ಅನ್ನು 4 ಬಿಲಿಯನ್ ಬ್ರಿಟಿಷ್ ಪೌಂಡ್‌ಗೆ ಮಾರಾಟ ಮಾಡಲು ಸಿದ್ಧವಾಗಿದೆ.

ಫೋರ್ಬ್ಸ್ ವಿಶ್ವದ ಎಂಟನೇ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಹಾಗೂ  ವ್ಯವಸ್ಥಾಪಕ ನಿರ್ದೇಶಕ ಅಂಬಾನಿ ಅವರು ಕ್ಲಬ್ ಬಗ್ಗೆ ವಿಚಾರಿಸಿದ್ದಾರೆ ಎಂದು ಇಂಗ್ಲಿಷ್ ದಿನಪತ್ರಿಕೆ ವರದಿ ಮಾಡಿದೆ.

Similar News