ಕೆ.ಸಿ.ರೋಡ್: ಸಲಫಿ ಸಮ್ಮೇಳನದ ಪ್ರಚಾರ ಉದ್ಘಾಟನಾ ಸಭೆ

Update: 2022-11-13 13:10 GMT

ಕೆ.ಸಿ.ರೋಡ್: ಕರ್ನಾಟಕ ಸಲಫಿ ಅಸೋಸಿಯೇಷನ್ ಮಂಗಳೂರು ಇದರ ವತಿಯಿಂದ ಮಾರ್ಚ್ 2023 ರಲ್ಲಿ ನಡೆಯಲಿರುವ ಸಲಫಿ ಸಮ್ಮೇಳನದ ಪ್ರಚಾರ ಉದ್ಘಾಟನಾ ಸಮಾರಂಭವು ನ.12ರಂದು ಕೆ.ಸಿ.ರೋಡಿನ ಕೊಮರಂಗಳ ಕ್ರಾಸ್'ನಲ್ಲಿ ಜರಗಿತು.

ಕರ್ನಾಟಕ ಸಲಫಿ ಅಸೋಸಿಯೇಷನ್ ಮಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಮೌಲವಿ ಇಜಾಝ್ ಸ್ವಲಾಹಿ ಸಮ್ಮೇಳನದ ಪ್ರಚಾರ ಉದ್ಘಾಟನೆಯನ್ನು ನಡೆಸಿದರು. ಅಲ್ ಬಯಾನ್ ಅರೇಬಿಕ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಹಫೀಝ್ ಸ್ವಲಾಹಿ ಮಾತನಾಡುತ್ತಾ ಪ್ರವಾದಿ (ಸ)ರವರ ಜೀವನವು ಮನುಕುಲಕ್ಕೆ ಶಾಂತಿಯ ಸಂದೇಶವನ್ನು ಸಾರಿದೆ ಎಂದರು.

ಇಸ್ಲಾಂ ಮನುಷ್ಯನ ಇಹ-ಪರ ಮೋಕ್ಷಕ್ಕಿರುವ ಸೃಷ್ಟಿಕರ್ತನಿಂದ ಅವತೀರ್ಣವಾದ ಅಂತಿಮ ಸಂದೇಶವಾಗಿದ್ದು, ಯುವ ಸಮೂಹವು ಅಮಲು ಪದಾರ್ಥಗಳ ಗುಲಾಮರಾಗುತ್ತಿರುವ ಆಧುನಿಕ ಯುಗದಲ್ಲಿ ಕುರ್'ಆನಿನ ಮೂಲಕ ಯುವ ಸಮೂಹವನ್ನು ಅಮಲು ಪದಾರ್ಥಗಳಿಂದ ವಿಮೋಚನೆ ಮಾಡಬೇಕೆಂದು ಖ್ಯಾತ ವಿದ್ವಾಂಸರಾದ ಮೌಲವಿ ಶಾಫಿ ಸ್ವಬಾಹಿ ಕರೆ ನೀಡಿದರು.

ಅಲ್ ಬಯಾನ್ ಅರೇಬಿಕ್ ಕಾಲೇಜಿನ ಪ್ರಾಧ್ಯಾಪಕರಾದ ಶೈಖ್ ಶಾಕಿರ್ ಅಹ್ಮದ್ ಮದನಿ ಉಪಸ್ಥಿತರಿದ್ದರು. ನಾಸಿರ್ ಇಬ್ನು ಆದಂ ಸ್ವಾಗತಿಸಿ, ಅಹ್ಮದ್ ಸಾಮನಿಗೆ ವಂದಿಸಿದರು.

Similar News