ಪಡುಬಿದ್ರೆ: ವರ್ಣ ವಿಹಾರ-2022; ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಸ್ಪರ್ಧೆ

Update: 2022-11-13 13:15 GMT

ಪಡುಬಿದ್ರೆ: ಮಕ್ಕಳ ದಿನಾಚರಣೆಯ ಪ್ರಯುಕ್ತ ಪಡುಬಿದ್ರೆ ಬ್ಲೂ ಫ್ಲ್ಯಾಗ್ ಬೀಚ್‍ನಲ್ಲಿ ಶನಿವಾರ ವರ್ಣ ವಿಹಾರ -2022 ಉಭಯ ಜಿಲ್ಲಾ ಶಾಲಾ ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಶನಿವಾರ ಜರಗಿತು.

ರೋಟರಿ ಕ್ಲಬ್ ಪಡುಬಿದ್ರಿ, ಪ್ರವಾಸೋದ್ಯಮ ಇಲಾಖೆ ಉಡುಪಿ, ಬ್ಲೂ ಫ್ಲ್ಯಾಗ್ ಬೀಚ್ ಪಡುಬಿದ್ರಿ ಜಂಟಿ ಸಹಯೋಗದೊಂದಿಗೆ ಉಜ್ವಲ್ ಡಿಸೈನ್ಸ್ ಮತ್ತು ಪ್ರಿಂಟಿಂಗ್ಸ್ ಪಡುಬಿದ್ರಿ ಪ್ರಾಯೋಜಕತ್ವದಲ್ಲಿ ನಡೆದ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಸುಮಾರು 400ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬಹುಮಾನ ವಿಜೇತರು : ಒಂದರಿಂದ ನಾಲ್ಕನೇ ತರಗತಿಯ ವಿಭಾಗದಲ್ಲಿ ನನ್ನ ಕಲ್ಪನೆಯ ಶಾಲೆ ವಿಷಯದಲ್ಲಿ ಪ್ರಥಮ ಬಹುಮಾನವನ್ನು ಶ್ರೀ ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಮುಲ್ಕಿ ವಿದ್ಯಾರ್ಥಿ ಚವಿ ಎಸ್ ಅಮೀನ್, ದ್ವಿತೀಯ ಬಹುಮಾನವನ್ನು ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸಾನ್ವಿ ಎಸ್ ದೇವಾಡಿಗ. ಐದರಿಂದ ಎಂಟನೇ ತರಗತಿಯ ವಿಭಾಗದಲ್ಲಿ ಸ್ವಾತಂತ್ರ್ಯ ಹೋರಾಟಗಾರರು ವಿಷಯದಲ್ಲಿ ವ್ಯಾಸ ಮಹರ್ಷಿ ವಿದ್ಯಾಪೀಠ ಕಿಲ್ಪಾಡಿ ಮುಲ್ಕಿ ವಿದ್ಯಾರ್ಥಿ ಅಜಿತ್ ಎಸ್ ಕಾಮತ್ ಪ್ರಥಮ, ವಿದ್ಯಾ ಪ್ರಸಾರ ವಿದ್ಯಾ ಮಂದಿರ್ ಶಾಲೆಯ ಜ್ಞಾನೇಶ್ ದ್ವಿತೀಯ. 9 ರಿಂದ 12ನೇ ತರಗತಿಯ ವಿಭಾಗದಲ್ಲಿ ಪ್ರಕೃತಿ ವಿಷಯದಲ್ಲಿ ವ್ಯಾಸ ಮಹರ್ಷಿ ವಿದ್ಯಾಪೀಠ ಕಿಲ್ಪಾಡಿ ಮುಲ್ಕಿ ಶಾಲೆಯ ಅಥರ್ವ ಪ್ರಥಮ, ಗಣಪತಿ ಪ್ರೌಢಶಾಲೆ ಪಡುಬಿದ್ರಿಯ ಪ್ರಖ್ಯಾತ್ ದ್ವಿತೀಯ. ಸಾರ್ವಜನಿಕ ವಿಭಾಗದಲ್ಲಿ ಅರ್ಚನಾ ಭಟ್ ಪ್ರಥಮ, ಇರ್ಫಾನ್ ಶೇಕ್ ದ್ವಿತೀಯ ಬಹುಮಾನ ಪಡೆದಿರುತ್ತಾರೆ.

ಸನ್ಮಾನ : ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಫಲಿಮಾರು, ವೆಂಕಟೇಶ ದೇವಾಡಿಗ, ಪತ್ರಕರ್ತ ರಾಮಚಂದ್ರ ಆಚಾರ್ಯರನ್ನು ಸನ್ಮಾನಿಸಲಾಯಿತು.

ರೋಟರಿ ಕ್ಲಬ್ ಪಡುಬಿದ್ರಿ, ಪ್ರವಾಸೋದ್ಯಮ ಇಲಾಖೆ ಉಡುಪಿ, ಬ್ಲೂ ಫ್ಲ್ಯಾಗ್ ಬೀಚ್ ಪಡುಬಿದ್ರಿ ಜಂಟಿ ಸಹಯೋಗದೊಂದಿಗೆ ಉಜ್ವಲ್ ಡಿಸೈನ್ಸ್ ಮತ್ತು ಪ್ರಿಂಟಿಂಗ್ಸ್ ಪಡುಬಿದ್ರಿ ಪ್ರಾಯೋಜಕತ್ವದಲ್ಲಿ ನಡೆದ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಸುಮಾರು 400ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಪಡುಬಿದ್ರಿ ಅಧ್ಯಕ್ಷರಾದ ಗೀತಾ ಅರುಣ್ ವಹಿಸಿದ್ದರು. ಚಿತ್ರ ಕಲಾವಿದ ಪಿ.ಎನ್.ಆಚಾರ್ಯ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಹರೀಶ್ ಶೆಟ್ಟಿ ಅಬ್ಬೇಡಿ, ವಿದ್ಯಾಶ್ರೀ, ವಿನಾಯಕ ಪುತ್ರನ್, ಕಾಡಿಪಟ್ಣ ಮೊಗವೀರ ಸಭಾ ಅಧ್ಯಕ್ಷ ಅಶೋಕ್ ಸಾಲ್ಯಾನ್, ರೋಟರಿ ಕ್ಲಬ್ ಪೂರ್ವಾಧ್ಯಕ್ಷ ಕೃಷ್ಣ ಬಂಗೇರ, ಉಜ್ವಲ್ ಡಿಸೈನ್ ಮತ್ತು ಪ್ರಿಂಟಿಂಗ್‍ನ ಅಬ್ದುಲ್ ವಾಹೀದ್, ಬ್ಲೂಫ್ಲ್ಯಾಗ್ ಬೀಚ್‍ನ ಮೇಲ್ವಿಚಾರಕ ನಿತೇಶ್ ಕುಮಾರ್ ಉಪಸ್ಥಿತರಿದ್ದರು.

ರೋಟರಿ ವಲಯ ಸಹಾಯಕ ಗವರ್ನರ್ ಡಾ. ಶಶಿಕಾಂತ ಕರಿಂಕ, ಪ್ರವಾಸೋಧ್ಯಮ ಇಲಾಖೆಯ ಭವಿಷ್, ಪಡುಬಿದ್ರೆ ಸಹಕಾರಿ ವ್ಯವಸಾಯಿಕ  ಸೊಸೈಟಿಯ ಅಧ್ಯಕ್ಷ ವೈ. ಸುಧೀರ್ ಕುಮಾರ್, ಪೂರ್ವ ವಲಯ ಸಹಾಯಕ ಗವರ್ನರ್ ಮಾಧವ ಸುವರ್ಣ, ಗಣೇಶ್ ಆಚಾರ್ಯ ಉಚ್ಚಿಲ, ಸಾಗರ್ ವಿದ್ಯಾಮಂದಿರದ ಸಂಚಾಲಕ ಸುಕುಮಾರ್ ಶ್ರೀಯಾನ್, ಕಾಪು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ  ಸುರೇಶ್ ಎರ್ಮಾಳು, ನಡಿಪಟ್ಣ ಮೊಗವೀರ ಸಭಾ ಅಧ್ಯಕ್ಷ ಗಂಗಾಧರ ಕರ್ಕೇರ, ಉಜ್ವಲ್ ಡಿಸೈನ್ ಮತ್ತು ಪ್ರಿಂಟಿಂಗ್‍ನ ಅಬ್ದುಲ್ ಹಮೀದ್, ಬ್ಲೂಫ್ಲ್ಯಾಗ್ ಬೀಚ್‍ನ ಉಪನಿಬಂಧಕ ಕಿರಣ್ ರಾಜ್ ಕರ್ಕೇರ, ಕಾರ್ಯಕ್ರಮದ  ನಿರ್ದೇಶಕರಾದ ತಸ್ನೀನ್ ಅರ್ಹಾ, ಮಹಮ್ಮದ್ ನಿಯಾಝ್, ಗಣೇಶ್ ಶೆಟ್ಟಿಗಾರ್, ರೂಪ ವಸುಂಧರಾ, ಕಾರ್ಯದರ್ಶಿ ಜ್ಯೋತಿ ಮೆನನ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರೋಟರಿ ಪದಾಧಿಕಾರಿಗಳು, ಸದಸ್ಯರು, ರೋಟರಿ ಸಮುದಾಯ ದಳದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಸ್ಪರ್ಧೆಯ ತೀರ್ಪುಗಾರರಾಗಿ ಪಿಎನ್ ಆಚಾರ್ಯ ಮತ್ತು ಗುರುಪ್ರಸಾದ್ ಸಹಕರಿಸಿ ದ್ದರು. ರೋಟರಿ ಅಧ್ಯಕ್ಷರಾದ ಗೀತಾ ಅರುಣ್ ಸ್ವಾಗತಿಸಿದರು. ಬಹುಮಾನಿತರ ಪಟ್ಟಿಯನ್ನು ಯಶೋದ ವಾಚಿಸಿದರು. ಕಾರ್ಯಕ್ರಮವನ್ನು ಸುಧಾಕರ್ ನಿರೂಪಿಸಿದರು.

Similar News