ದ.ಕ.ಜಿಲ್ಲಾ ಕಾಂಗ್ರೆಸ್‌ನಿಂದ ಜವಾಹರಲಾಲ್ ನೆಹರು ಜನ್ಮದಿನಾಚರಣೆ

Update: 2022-11-14 14:41 GMT

ಮಂಗಳೂರು : ದ.ಕ.ಜಿಲ್ಲಾ ಕಾಂಗ್ರೆಸ್ ವತಿಯಿಂದ ಸೋಮವಾರ ನಗರದಲ್ಲಿ ಪಂಡಿತ್ ಜವಾಹರ್ ಲಾಲ್ ನೆಹರೂ ಜನ್ಮದಿನ ಆಚರಿಸಲಾಯಿತು.

ಈ ಸಂದರ್ಭ ಮಾಜಿ ಸಚಿವ ರಮಾನಾಥ ರೈ ಅವರು ನೆಹರೂ ಮೈದಾನದಲ್ಲಿರುವ ನೆಹರೂ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಜನ್ಮದಿನದ ಸಂದೇಶ ನೀಡಿದರು.

ಭಾರತದ ಪ್ರಪ್ರಥಮ ಪ್ರಧಾನಿ ನೆಹರು ಅವರ ಹೆಸರನ್ನು ನಗರದ ಈ ಮೈದಾನಕ್ಕೆ ಇಟ್ಟಿರುವುದನ್ನು ಸರ್ವ ಪಕ್ಷದವರು ಒಮ್ಮತದಿಂದ ಸ್ವೀಕರಿಸಿ ಅದೇ ಹೆಸರು ಶಾಶ್ವತವಾಗಿರಿಸಲಿ ಎಂದು ರಮಾನಾಥ ರೈ ಆಶಿಸಿದರು.

14 ವರ್ಷಗಳ ಕಾಲ ಸೆರವಾಸ ಅನುಭವಿಸಿ ಗಾಂಧಿ ಮಾರ್ಗದಲ್ಲಿ ನಡೆದು ನಂತರ ಪ್ರಥಮ ಪ್ರಧಾನಿಯಾಗಿ ಭವ್ಯ ದೇಶವನ್ನು ಕಟ್ಟಿದ ಮಹಾನ್ ನಾಯಕನಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ. ದೇಶಕ್ಕೆ ಅಪಾರ ಕೊಡುಗೆ ನೀಡಿದ ಈ ನಾಯಕನ ಹೆಸರನ್ನು ಮಂಗಳೂರಿನ ಮೈದಾನಕ್ಕೆ ಇಟ್ಟಿರುವುದು ಶ್ಲಾಘನೀಯ ಎಂದು ರಮಾನಾಥ ರೈ ಹೇಳಿದರು.

ಈ ಸಂದರ್ಭ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಸಾಲ್ಯಾನ್, ಕೆಪಿಸಿಸಿ ಸದಸ್ಯೆ ಎಸ್.ಅಪ್ಪಿ, ಉಮ್ಮರ್ ಫಾರೂಕು, ಮನಪಾ ವಿಪಕ್ಷ ನಾಯಕ ನವೀನ್ ಡಿಸೋಜ, ಮನಪಾ ಸದಸ್ಯರಾದ ಅಬ್ದುಲ್ ರವೂಫ್, ಸಂಶುದ್ದೀನ್ ಕುದ್ರೋಳಿ, ಅಬ್ದುಲ್ ಲತೀಫ್ ಕಂದಕ್, ಝೀನತ್ ಸಂಶುದ್ದೀನ್, ಪಕ್ಷದ ಮುಖಂಡರಾದ ಶಾಹುಲ್ ಹಮೀದ್ ಕೆ.ಕೆ., ಬಿ.ಎಂ. ಅಬ್ಬಾಸ್ ಅಲಿ, ಲಾರೆನ್ಸ್ ಡಿಸೋಜ, ನೀರಜ್‌ಚಂದ್ರಪಾಲ್, ಶಬ್ಬೀರ್ ಎಸ್, ಸಿ.ಎಂ. ಮುಸ್ತಫಾ, ಯು.ಎಚ್. ಖಾಲಿದ್, ಶುಭೋದಯ ಆಳ್ವ, ಮುಹಮ್ಮದ್ ಕುಂಜತ್ತಬೈಲ್, ಸಬಿತಾ ಮಿಸ್ಕಿತ್, ಮಲ್ಲಿಕಾ ಪಕ್ಕಳ, ಚಂದ್ರಕಲಾ ಜೋಗಿ, ವಿದ್ಯಾ ಅತ್ತಾವರ, ಮಾಜಿ ಕಾರ್ಪೊರೇಟರ್‌ಗಳಾದ ವಿಜಯಲಕ್ಷ್ಮಿ, ಪದ್ಮನಾಭ ಅಮೀನ್, ಟಿ.ಕೆ. ಶೈಲಜಾ, ಡಿ.ಎಂ. ಅಸ್ಲಾಂ, ಟಿ.ಹೊನ್ನಯ್ಯ, ದುರ್ಗಪ್ರಸಾದ್, ಅಬ್ದುಲ್ ಸಲೀಂ ಪಾಂಡೇಶ್ವರ, ರಮಾನಂದ ಪೂಜಾರಿ, ಎಸ್.ಕೆ. ಸೌಹಾನ್, ಮುಹಮ್ಮದ್ ಬಪ್ಪಳಿಗೆ, ಅಶ್ರಫ್ ಗರಡಿ, ಸುಜಾತಾ, ದೀಪಕ್, ಮೇರಿ ಡಿಸೋಜ, ಸಲ್ಲುಧಾರ್ ಡಿಸೋಜ, ಚಂದ್ರಾವತಿ, ಹೈದರ್ ಬೋಳಾರ, ಹುಸೈನ್ ಬೋಳಾರ, ರಂಜನ್ ಅತ್ತಾವರ, ಕ್ಲೀಫರ್ಡ್, ನೌಶೀರ್ ಉಪಸ್ಥಿತರಿದ್ದರು.

ಮಾಜಿ ಮೇಯರ್ ಶಶಿಧರ್ ಹೆಗ್ಡೆ ಸ್ವಾಗತಿಸಿದರು. ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ. ಅಬ್ದಲ್ ಸಲೀಂ ವಂದಿಸಿದರು.

Similar News