ಮಹಿಳೆಯನ್ನು ರಕ್ಷಿಸಲು ಹೋದ ಒಂದೇ ಕುಟುಂಬದ 5 ಮಂದಿ ಜಲಸಮಾಧಿ
Update: 2022-11-15 08:06 IST
ಕಚ್: ನೀರಿನಲ್ಲಿ ಮುಳುಗುತ್ತಿದ್ದ ಮಹಿಳೆಯೊಬ್ಬರನ್ನು ರಕ್ಷಿಸಲು ಹೋದ ಒಂದೇ ಕುಟುಂಬದ ಐದು ಮಂದಿ ನರ್ಮದಾ ನಾಲೆಯಲ್ಲಿ ಮುಳುಗಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ. ಕಚ್‍ನಲ್ಲಿ ಈ ದುರಂತ ಸಂಭವಿಸಿದೆ ಎಂದು ಎಸ್ಪಿ ಸೌರಭ್ ಸಿಂಗ್ ಹೇಳಿದ್ದಾರೆ.
ಎಲ್ಲ ಮೃತದೇಹಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನೀರು ತರಲು ಕಾಲುವೆಗೆ ಬಗ್ಗಿದ ಮಹಿಳೆ ಮೊದಲು ನೀರು ಪಾಲಾದಳು ಎಂದು ಅವರು ವಿವರಿಸಿದ್ದಾರೆ.
"ಮುಂದ್ರಾದ ಗುಂಡಾಲಾ ಗ್ರಾಮದ ನರ್ಮದಾ ಕಾಲುವೆಯಲ್ಲಿ ಒಂದು ಕುಟುಂಬದ ಐದು ಮಂದಿ ನೀರು ಪಾಲಾಗಿದ್ದಾರೆ. ಪೊಲೀಸರು ಎಲ್ಲ ದೇಹಗಳನ್ನು ಹೊರ ತೆಗೆದಿದ್ದಾರೆ. ನೀರು ತರಲು ಕಾಲುವೆಗೆ ಹೋದ ಮಹಿಳೆಯೊಬ್ಬರು ಜಾರಿ ಬಿದ್ದಾಗ ಅವರನ್ನು ರಕ್ಷಿಸಲು ಹೋದ ಕುಟುಂಬದ ಐದು ಮಂದಿ ಮುಳುಗಿದರು" ಎಂದು ಕಚ್ ಪಶ್ಚಿಮ ಎಸ್ಪಿ ಸೌರಭ್ ಸಿಂಗ್ ಹೇಳಿದ್ದಾರೆ. ಈ ಬಗ್ಗೆ ndtv.com ವರದಿ ಮಾಡಿದೆ.