ವೈದ್ಯಕೀಯ ನಿರ್ಲಕ್ಷ್ಯ ಆರೋಪ: ಉದಯೋನ್ಮುಖ ಫುಟ್ಬಾಲ್ ಆಟಗಾರ್ತಿ ಮೃತ್ಯು

Update: 2022-11-15 09:34 GMT

ಚೆನ್ನೈ: 17 ವರ್ಷದ ಉದಯೋನ್ಮುಖ ಫುಟ್ಬಾಲ್ ಆಟಗಾರ್ತಿಯೊಬ್ಬಳು  ವೈದ್ಯಕೀಯ ನಿರ್ಲಕ್ಷ್ಯದಿಂದಾಗಿ ಮಂಗಳವಾರ  ಚೆನ್ನೈನಲ್ಲಿ ಸಾವನ್ನಪ್ಪಿದ್ದಾಳೆ.

ಘಟನೆಗೆ ಸಂಬಂಧಿಸಿ ಸರಕಾರಿ ಆಸ್ಪತ್ರೆಯ ಇಬ್ಬರು ವೈದ್ಯರನ್ನು ಅಮಾನತುಗೊಳಿಸಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಪದವಿಪೂರ್ವ ವಿದ್ಯಾರ್ಥಿನಿಯಾಗಿರುವ ಪ್ರಿಯಾ ಅವರು ಸರಕಾರಿ ಆಸ್ಪತ್ರೆಯಲ್ಲಿ ಬಲ ಮೊಣಕಾಲಿಗೆ ಸಂಬಂಧಿತ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಆದರೆ ಶಸ್ತ್ರಚಿಕಿತ್ಸೆಯ ನಂತರದ ಸಮಸ್ಯೆ ಕಾಣಿಸಿಕೊಂಡ ಕಾರಣ  ಪ್ರಿಯಾಳ ರಾಜೀವ್ ಗಾಂಧಿ ಸರಕಾರಿ ಜನರಲ್ ಆಸ್ಪತ್ರೆಯಲ್ಲಿ (RGGGH) ಚಿಕಿತ್ಸೆಗೆ ಒಳಗಾಗಬೇಕಾಯಿತು ಹಾಗೂ  ನವೆಂಬರ್ 8 ರಿಂದ ಅಲ್ಲಿಗೆ ದಾಖಲಾಗಿದ್ದರು.

ತನಿಖೆಯಲ್ಲಿ ವೈದ್ಯರ ನಿರ್ಲಕ್ಷ್ಯ ಬೆಳಕಿಗೆ ಬಂದಿದೆ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣ್ಯಂ ಹೇಳಿದ್ದಾರೆ.

 "ಇದು ತುಂಬಲಾರದ ನಷ್ಟವಾಗಿದೆ. ಶಸ್ತ್ರಚಿಕಿತ್ಸೆ ಚೆನ್ನಾಗಿತ್ತು. ಆದರೆ ಕಂಪ್ರೆಷನ್ ಬ್ಯಾಂಡೇಜ್ ಅನ್ನು ಬಿಗಿಯಾಗಿ ಹಾಕಲಾಗಿದ್ದು ಅದು ರಕ್ತ ಪರಿಚಲನೆಯನ್ನು ನಿಲ್ಲಿಸಿದೆ. ನಾವು ಪೊಲೀಸ್ ತನಿಖೆಯನ್ನು ಆರಂಭಿಸಿದ್ದೇವೆ ಹಾಗೂ  ಇಬ್ಬರು ವೈದ್ಯರನ್ನು ಅಮಾನತುಗೊಳಿಸಿದ್ದೇವೆ" ಎಂದು ಅವರು ಹೇಳಿದರು.

ರಾಜ್ಯ ಸರಕಾರ ಬಾಲಕಿಯ ಕುಟುಂಬಕ್ಕೆ  10 ಲಕ್ಷ  ರೂ. ಆರ್ಥಿಕ ನೆರವು ಮತ್ತು ಆಕೆಯ ಓರ್ವ ಸಹೋದರನಿಗೆ ಸರಕಾರಿ ಉದ್ಯೋಗವನ್ನು ಘೋಷಿಸಿದೆ ಎಂದು ರಾಜ್ಯ ಸಚಿವರು ಹೇಳಿದರು.

Similar News