ಶಿವಸೇನೆಯ ಬಣಗಳ ನಡುವೆ ಘರ್ಷಣೆ

Update: 2022-11-15 16:22 GMT

ಥಾಣೆ, ನ. 15: ಮಹಾರಾಷ್ಟ್ರದ ಥಾಣೆಯಲ್ಲಿ ಶಿವಸೇನೆ(Shiv Sena)ಯ ಎರಡು ಬಣಗಳ ನಡುವೆ ಸೋಮವಾರ ರಾತ್ರಿ ಘರ್ಷಣೆ ನಡೆದಿದೆ.

ಕಿಸಾನ್ ನಗರದಲ್ಲಿ ಉದ್ಧವ್ ಠಾಕ್ರೆ(Uddhav Thackeray) ಬಣಕ್ಕೆ ಸೇರಿದ ನೂತನ ಪದಾಧಿಕಾರಿಗಳ ಸನ್ಮಾನ ಸನ್ಮಾನ ಸಮಾರಂಭ ನಡೆಯುತ್ತಿದ್ದಾಗ ಘರ್ಷಣೆ ಸಂಭವಿಸಿದೆ. ನೂತನ ಪದಾಧಿಕಾರಿಗಳನ್ನು ಅಭಿನಂದಿಸುವುದಕ್ಕಾಗಿ ಸಂಸದ ರಾಜನ್ ವಿಚಾರೆ (Rajan question)ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು.

ಸಮಾರಂಭದ ವೇಳೆ, ಮುಖ್ಯಮಂತ್ರಿ ಏಕನಾಥ ಶಿಂಧೆ ಬಣಕ್ಕೆ ಸೇರಿದ ಕೆಲವು ಶಿವಸೇನೆ ಕಾರ್ಯಕರ್ತರು ಠಾಕ್ರೆ ಬಣಕ್ಕೆ ಸೇರಿದ ಕಾರ್ಯಕರ್ತರನ್ನು ನಿಂದಿಸಿದರು ಎಂದು ಹೇಳಲಾಗಿದೆ. ಆಗ ಎರಡೂ ಬಣಗಳ ಕಾರ್ಯಕರ್ತರು ಪರಸ್ಪರರ ವಿರುದ್ಧ ಘೋಷಣೆಗಳನ್ನು ಕೂಗಿದರು. ಅಂತಿಮವಾಗಿ ಸ್ಥಳವು ರಣಾಂಗಣವಾಯಿತು. ಗುಂಪುಗಳನ್ನು ಚದುರಿಸಿಲು ಪೊಲೀಸರು ಬೆತ್ತಪ್ರಹಾರ ಮಾಡಿದರು.

ಬಳಿಕ ಎರಡೂ ಬಣಗಳ ಕಾರ್ಯಕರ್ತರು ಥಾಣೆಯ ಶ್ರೀನಗರ ಪೊಲೀಸ್ ಠಾಣೆಯಲ್ಲಿ ಪರಸ್ಪರರ ವಿರುದ್ಧ ದೂರುಗಳನ್ನು ದಾಖಲಿಸಿದರು.

Similar News