ತಾಜುಲ್ ಉಲಮಾ ರಿಲೀಫ್ ಆ್ಯಂಡ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಮನೆ ಹಸ್ತಾಂತರ

Update: 2022-11-16 13:14 GMT

ಕಿನ್ಯ ; ಕಿನ್ಯ ಪರಿಸರದಲ್ಲಿ ಇಬ್ಬರು ವಿಧವೆಯರು ಹಾಗೂ ಅವರ ಮಕ್ಕಳು ವಾಸಿಸುತ್ತಿದ್ದ ಮನೆಯು ಕಳೆದ ಮಳೆಗಾಲದಲ್ಲಿ ಕುಸಿದು ಬಿದ್ದಿತ್ತು. ವಿಷಯ ತಿಳಿದ ತಾಜುಲ್ ಉಲಮಾ ರಿಲೀಫ್ ಆ್ಯಂಡ್ ಚಾರಿಟೆಬಲ್ ದ.ಕ ಇದರ ಸದಸ್ಯರು ʼವಿಧವೆಗೊಂದು ಮನೆ ಯೋಜನೆʼಯ ಮುಖಾಂತರ ದಾನಿಗಳ ನೆರವಿನಿಂದ  ಮನೆಯ ಗೋಡೆ ಹಾಗೂ ಮೇಲ್ಛಾವಣಿಯನ್ನು ದುರಸ್ತಿಗೊಳಿಸಿ ಸೈದಲವಿ ತಂಙಲ್ ಕಿನ್ಯ, ಕೆಎಚ್ ಇಸ್ಮಾಯಿಲ್ ಸಹದಿ (ಬೆಂಗಳೂರು) ಕಿನ್ಯ, ಸಿದ್ದೀಕ್ ಫಾಲಿಳಿ ಕಿನ್ಯ ಇವರ ನೇತೃತ್ವದಲ್ಲಿ ಕುಟುಂಬಕ್ಕೆ ಮನೆ  ಹಸ್ತಾಂತರಿಸಲಾಯಿತು.

ಈ ಸಂದರ್ಭ ಮುಹಮ್ಮದ್ ಮುಸ್ಲಿಯಾರ್ ಕಿನ್ಯ, ಆಲಿಕುಂಞಿ, ಇಕ್ಬಾಲ್ ತಿಬ್ಲೆಪದವು, ಉಮರ್ ಫಾರೂಕು ಅಡ್ಯಾರ್ ಪದವು , ಇಲ್ಯಾಸ್ ವಗ್ಗ ಉಪಸ್ಥಿತರಿದ್ದರು.

Similar News