×
Ad

ವಾಟ್ಸ್ ಆ್ಯಪ್ ಪಾವತಿ ಭಾರತದಲ್ಲಿ ಅತಿ ದೊಡ್ಡ ವೈಫಲ್ಯ: ಅಶ್ನೀರ್ ಗ್ರೋವರ್

Update: 2022-11-16 22:23 IST

ಜೈಪುರ, ನ. 16: ವಾಟ್ಸ್ ಆ್ಯಪ್ (WhatsApp app)ಪಾವತಿ ಭಾರತದಲ್ಲಿ ಅತಿ ದೊಡ್ಡ ವೈಫಲ್ಯ ಎಂದು ಭಾರತ್‌ಪೇಯ ಮಾಜಿ ಆಡಳಿತ ನಿರ್ದೇಶಕ ಅಶ್ನೀರ್ ಗ್ರೋವರ್(Ashneer Grover) ಬುಧವಾರ ಹೇಳಿದ್ದಾರೆ. 

ದೇಶದ ಬೃಹತ್ ಯುಪಿಐ ಮಾರುಕಟ್ಟೆಯಲ್ಲಿ ಹಸ್ತಕ್ಷೇಪ ನಡೆಸುವಲ್ಲಿ ಈ ಟೆಕ್ ಉತ್ಪನ್ನಗಳು ಅಸಮರ್ಥತೆಯನ್ನು ಟೀಕಿಸಿದ ಗ್ರೋವರ್, ಇದು ಎಲ್ಲ ಸ್ಪರ್ಧಿಗಳನ್ನು ಸೋಲಿಸಬೇಕಾಗಿತ್ತು. ಯಾಕೆಂದರೆ, ದೇಶದ ಸರಿಸುಮಾರು ಎಲ್ಲ ಸ್ಮಾರ್ಟ್ ಫೋನ್‌ಗಳಲ್ಲಿ ಇದು ಇದೆ ಎಂದು ಪ್ರತಿಪಾದಿಸಿದ್ದಾರೆ. 

‘‘ಟೆಕ್ ಉತ್ಪನ್ನವಾಗಿ ವಾಟ್ಸ್ ಆ್ಯಪ್ ಪಾವತಿ ಭಾರತದಲ್ಲಿ ಅತಿ ದೊಡ್ಡ ವೈಫಲ್ಯ. ಪ್ರತಿಯೊಬ್ಬರ ಮೊಬೈಲ್‌ನಲ್ಲಿ ವಾಟ್ಸ್ ಆ್ಯಪ್ ಇದೆ. ಚಿತ್ರಗಳನ್ನು ಕಳುಹಿಸಿದಷ್ಟೇ ಸುಲಭವಾಗಿ ಯುಪಿಐಯನ್ನು ಬಳಸಿ ಡಬ್ಲ್ಯುಎಯಲ್ಲಿ ಹಣವನ್ನು ರವಾನಿಸಬಹುದು. ಅದು ಪೇಟಿಎಂ, ಫೋನ್‌ಪೇ, ಗೂಗಲ್ ಪೇಯನ್ನು ಸೋಲಿಸಬೇಕಿತ್ತು’’ ಎಂದು ಅವರು ಹೇಳಿದ್ದಾರೆ. 

ತನ್ನ ಸುರಕ್ಷಾ ವೈಶಿಷ್ಟ್ಯಗಳ ಕುರಿತ ಜಾಹೀರಾತುಗಳನ್ನು ಪೋಸ್ಟ್ ಮಾಡುವ ಬದಲು ಪಾವತಿ ಸೇವೆಯನ್ನು ಸುಧಾರಿಸಲು ವಾಟ್ಸ್ ಆ್ಯಪ್ ಹೂಡಿಕೆ ಮಾಡಬೇಕು ಎಂದು ಗ್ರೋವರ್ ತಿಳಿಸಿದ್ದಾರೆ.

Similar News