ಹನುಮಾನ್ ಚಿತ್ರವಿದ್ದ ದೇಗುಲ ಆಕಾರದ ಕೇಕ್ ಕತ್ತರಿಸಿದ ಕಮಲ್‌ ನಾಥ್ ವಿರುದ್ಧ ಬಿಜೆಪಿ ಕಿಡಿ

Update: 2022-11-17 03:26 GMT

ಭೋಪಾಲ್: ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಮುಖಂಡ ಕಮಲ್‌ ನಾಥ್ (Former Madhya Pradesh chief minister and Congress leader Kamal Nath) ಅವರು ಹನುಮಾನ್ ಚಿತ್ರ ಇದ್ದ ದೇಗುಲ ಆಕಾರದ ಕೇಕ್ ಕತ್ತರಿಸುವ ಮೂಲಕ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ ಎಂದು hindustantimes.com ವರದಿ ಮಾಡಿದೆ.

ಕಾಂಗ್ರೆಸ್ ಮುಖಂಡ ಹಿಂದೂ ಭಾವನೆಗಳನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಆಪಾದಿಸಿದೆ. ಈ ಕೇಕ್ ಅನ್ನು ಚಿಂದ್ವಾರಾ(Chindwara)ದಿಂದ ಕಾಂಗ್ರೆಸ್ ಕಾರ್ಯಕರ್ತರು ತಂದಿದ್ದು, ಮುಂಚಿತವಾಗಿಯೇ ತಮ್ಮ ಮುಖಂಡನ ಹುಟ್ಟುಹಬ್ಬವನ್ನು ಆಚರಿಸಲು ಇದನ್ನು ಸಿದ್ಧಪಡಿಸಿದ್ದರು ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.

ಕಮಲ್‌ ನಾಥ್ ಅವರು ಮುಖ್ಯಮಂತ್ರಿಯಾಗುವ ಮುನ್ನ ಚಿಂದ್ವಾರಾದಲ್ಲಿ ಅವರು ನಿರ್ಮಿಸಿದ್ದ 121 ಅಡಿಯ ಹನುಮಾನ್ ಮಂದಿರದ ಆಕೃತಿಯ ಕೇಕ್ ಇದಾಗಿತ್ತು ಎಂದು ಹೇಳಿದೆ.

ಕಮಲ್‌ ನಾಥ್ ಅವರ ಅನುಯಾಯಿಗಳು ತಮ್ಮ ಮುಖಂಡನನ್ನು ಸನ್ಮಾನಿಸಿ ಅವರನ್ನು ಭಾರತ ರಾಜಕೀಯದ ಕೊಹಿನೂರ್ ವಜ್ರ ಎಂದು ಬಣ್ಣಿಸಿದರು. ಹುಟ್ಟುಹಬ್ಬದ ಆಚರಣೆಯಾಗಿ ಅಭಿಮಾನಿಗಳು ನಾಯಕನ ಗುಣಗಾನ ಮಾಡಿದ್ದಲ್ಲದೇ ಪಟಾಕಿ ಸಿಡಿಸಿ, ಉಡುಗೊರೆಗಳನ್ನು ನೀಡಿ ಸಂಭ್ರಮಿಸಿದರು.

ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Madhya Pradesh chief minister Shivraj Singh Chouhan), ಕಮಲ್ ನಾಥ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಕಾಂಗ್ರೆಸ್‍ಗೆ ದೇವರ ಮೇಲೆ ಭಕ್ತಿ ಇಲ್ಲ ಎಂದು ಟೀಕಿಸಿದ್ದಾರೆ. ಹನುಮಾನ್ ಚಿತ್ರ ಹೊಂದಿದ್ದ ಕೇಕ್ ತಯಾರಿಸಿ ಕತ್ತರಿಸುವುದು ಹಿಂದೂ ಧರ್ಮಕ್ಕೆ ಮತ್ತು ಸನಾತನ ಸಂಪ್ರದಾಯಕ್ಕೆ ಮಾಡಿದ ಅವಮಾನ. ಸಮಾಜ ಇದನ್ನು ಒಪ್ಪುವುದಿಲ್ಲ ಎಂದು ಅವರು ಹೇಳಿದ್ದಾರೆ.‌ ಈ ಬಗ್ಗೆ hindustantimes.com ವರದಿ ಮಾಡಿದೆ.

Similar News