×
Ad

ಕಲ್ಲಡ್ಕ: ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಸೀರತ್ ಕಾರ್ಯಕ್ರಮ

Update: 2022-11-17 09:57 IST

ಕಲ್ಲಡ್ಕ, ನ.17: ಗೋಳ್ತಮಜಲಿನಲ್ಲಿರುವ ಅನುಗ್ರಹ ಮಹಿಳಾ ಕಾಲೇಜಿನಲ್ಲಿ ಇತ್ತೀಚೆಗೆ ಪ್ರವಾದಿ ಮುಹಮ್ಮದ್ (ಸ.) ರವರ ಸೀರತ್ ಕಾರ್ಯಕ್ರಮ ಇತ್ತೀಚೆಗೆ ಜರುಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಅನುಪಮಾ ಮಹಿಳಾ ಮಾಸಿಕದ ಉಪ ಸಂಪಾದಕಿ ಸಬೀಹಾ ಫಾತಿಮಾ ಕುರ್ ಆನ್ ಮತ್ತು ಪ್ರವಾದಿ ಮಹಮ್ಮದ್(ಸ)ರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮಹತ್ವದ ಕುರಿತು ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಹೇಮಲತಾ ಬಿ.ಡಿ., ಉಪ ಪ್ರಾಂಶುಪಾಲೆ ಮಮತಾ ಎಸ್. ರೈ, ಮೌಲ್ಯ ಶಿಕ್ಷಣ ವಿಭಾಗದ ಉಪನ್ಯಾಸಕಿ ಸಲೀಮಾ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ವಿದ್ಯಾರ್ಥಿನಿಯರಾದ ಸಫ್ರತ್ ಕಿರಾಅತ್ ಪಠಿಸಿದರು. ರಿಷಾ ಸ್ವಾಗತಿಸಿದರು. ಆಮೀನತ್ ಸಾಯಿಸ್ತಾ ವಂದಿಸಿದರು. ಫಾತಿಮಾ ಕಾರ್ಯಕ್ರಮವನ್ನು ನಿರೂಪಿಸಿದರು.

Similar News