ಮಂಗಳೂರು: ಕ್ಯಾರಟ್ ಲೇನ್ -ತನಿಷ್ಕ್ ಪಾಲುದಾರಿಕೆಯ ಆಭರಣ ಮಳಿಗೆ ಆರಂಭ

Update: 2022-11-19 14:34 GMT

ಮಂಗಳೂರು: ಭಾರತದ ಪ್ರಮುಖ ಓಮ್ನಿ-ಚ್ಯಾನೆಲ್ ಜ್ಯುವೆಲ್ಲರಿ ಬ್ರ್ಯಾಂಡ್ ಕ್ಯಾರಟ್ ಲೇನ್  ತನಿಷ್ಕ್ ಪಾಲುದಾರಿಕೆಯೊಂದಿಗೆ ತನ್ನ ಮೊದಲ ಮಳಿಗೆಯನ್ನು ಇಂದು ಮಂಗಳೂರಿನ ಬಿಜೈಯಲ್ಲಿ ಪ್ರಾರಂಭಿಸಿದೆ.

ಯೆನೆಪೊಯ ಹೋಮಿಯೋಪತಿ ವೈದ್ಯಕೀಯ ಕಾಲೇಜಿನ ಪ್ರೊ. ಡಾ.ಶಿಲ್ಪಿ ರಸ್ತೋಗಿ ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಯುಎಸ್ಎ ಖಾಸಗಿ ಸಂಸ್ಥೆಯ ವ್ಯವಸ್ಥಾಪಕಿ ಅನಿಶಾ ಸಲ್ದಾನ ಆಭರಣ ಪ್ರದರ್ಶನ ವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಕೆಎಂಸಿ ಫಿಸಿಯೋಥೆರಪಿ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಮೇಘಾ, ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕಿ ರಂಜಿತಾ ಆಚಾರ್ಯ , ಗ್ರಾಹಕರಾದ ದಿವ್ಯ ಡಿ.ಸೋಜ, ಲಾರೆಲ್ ಜ್ಯೋತಿ ಡಿ ಸೋಜ, ಪತ್ರಾವೋ, ಮೋನಾ ಪತ್ರಾವೋ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿದರು.

ಕ್ಯಾರಟ್ ಲೇನ್ ನ ಉಪಾಧ್ಯಕ್ಷರಾದ ಜೆನ್ನಿಫರ್ ಪಾಂಡ್ಯ ಮಂಗಳೂರಿನಲ್ಲಿ ನಮ್ಮ ಪ್ರಥಮ ಮಳಿಗೆಯನ್ನು ಆರಂಭಿಸಲು ಸಂತೋಷವಾಗುತ್ತದೆ. ಇದು ಭಾರತದ 156ನೆ ಮಳಿಗೆ ಮತ್ತು ದಕ್ಷಿಣ ಭಾರತದ 45ನೆ ಮಳಿಗೆಯಾಗಿದೆ. ಸುಮಾರು ಒಂದು ಮಿಲಿಯನ್ ಗ್ರಾಹಕರನ್ನು ಸಂಸ್ಥೆ ಹೊಂದಿದೆ. ವಜ್ರಾಭರಣ ಖರೀದಿಯಲ್ಲಿ  ಗ್ರಾಹಕರಿಗೆ ಶೇ 20 ರೀಯಾಯಿತಿ ದೊರೆಯಲಿದೆ. ಗ್ರಾಹಕರು ಈ ಮಳಿಗೆಯ ಮೂಲಕ ಕ್ಯಾರಟ್ ಲೇನ್ ನ ಸಾಂಪ್ರದಾಯಿಕ ಆಭರಣಗಳನ್ನು ಮೊಗ್ರಾ ಬ್ರ್ಯಾಂಡ್ ಆಭರಣಗಳು, ರಿಂಗ್, ಆಧುನಿಕ ಮಂಗಳ ಸೂತ್ರ ಗಳನ್ನು ಸಾಕಷ್ಟು ಆಯ್ಕೆಯೊಂದಿಗೆ ಮಂಗಳೂರಿನಲ್ಲಿ ಖರೀದಿ ಸಬಹುದು ಎಂದರು.

ಕ್ಯಾರಟ್ ಲೇನ್ ಪ್ರತಿನಿಧಿ ರಾಧಿಕಾ ಮೆಕ್ ಗ್ರೆಗರ್ ಮಾತನಾಡುತ್ತಾ, ನಮ್ಮಲ್ಲಿ ಶೇ 50ರಷ್ಟು ಗ್ರಾಹಕರು ಉಡುಗೊರೆ ನೀಡಲು ಖರೀದಿಸುತ್ತಾರೆ. ರೂ.5000 ಪ್ರಾರಂಭ ವಾಗುವ ಆಕರ್ಷಕ ಆಭರಣಗಳ ಸಂಗ್ರಹವಿದೆ ಎಂದರು.

ಕ್ಯಾರಟ್ ಲೇನ್ ರೀಜನಲ್ ಮ್ಯಾನೇಜರ್ ಕೇಶವ, ರೀಜನಲ್ ಮಾರ್ಕೆಟಿಂಗ್ ಮ್ಯಾನೇಜರ್ ಅಮೃತ್,ರೀಜನಲ್ ವರ್ಚುವಲ್ ಮ್ಯಾನೇಜರ್ ಸಂಮೃದ್ಧಿ, ಝಿಜಾ ಖಾದರ್  ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಉದ್ಯಮ ಪಾಲುದಾರರಾದ ಅಬ್ದುಲ್ ಖಾದರ್ ಹಾರೂನ್, ಇಸ್ಮಾಯಿಲ್ ಹಾರೂನ್, ರಫೀಕ್ ಹಾರೂನ್ ಅತಿಥಿ ಗಳನ್ನು ಸ್ವಾಗತಿಸಿದರು.

Similar News