ಫೈಝೀಸ್ ಉಲಮಾ ಒಕ್ಕೂಟದಿಂದ ರಕ್ತದಾನ ಶಿಬಿರ

Update: 2022-11-19 17:11 GMT

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಫೈಝೀಸ್ ಅಸೋಸಿಯೇಷನ್ ಉಲಮಾ ಒಕ್ಕೂಟವು ತನ್ನ ಇಪ್ಪತ್ತನೇ ವಾರ್ಷಿಕೋತ್ಸವ ಪ್ರಯುಕ್ತ ಉಲಮಾಗಳಿಂದ ರಕ್ತದಾನ ಶಿಬಿರ ಆಯೋಜಿಸಿದೆ.

ನ.21ರಂದು ಬಿಸಿರೋಡ್ ಸಮೀಪದ ಕೆಳಗಿನ ಮಿತ್ತಬೈಲಿನಲ್ಲಿ ದಾರುಲ್ ಮಹಾರಿಫ್ ಮದ್ರಸದಲ್ಲಿ ಮಂಗಳೂರು ಕೆ ಎಮ್ ಸಿ ಹಾಸ್ಪಿಟಲ್ ಸಹಯೋಗದೊಂದಿಗೆ ನಡೆಸಲಿದೆ.

ರಕ್ತ ವರ್ಗೀಕರಣ ಮತ್ತು ತ್ವಬೀಬ್ ಶೈಖ್ ಮುಹಮ್ಮದ್ ಇರ್ಫಾನಿ ಆರೋಗ್ಯ ಮಾಹಿತಿ ಶಿಬಿರ ಕೂಡ ನಡೆಯಲಿದೆ ಎಂದು ಜಿಲ್ಲಾ ಫೈಝೀಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಫೈಝಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Similar News