×
Ad

ಕಿನ್ಯ ರೇಂಜ್ ಮದ್ರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಮಹಾಸಭೆ

Update: 2022-11-20 18:00 IST

ಮಂಗಳೂರು: ಸಮಸ್ತ ಕೇರಳ ಮದ್ರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್ ಕಿನ್ಯ ರೇಂಜ್‌ನ ಮಹಾಸಭೆಯು ಅಸೈ- ನಾಟೆಕಲ್  ಅಲ್ ಬದ್ರಿಯಾ ಮದ್ರಸ ಸಭಾಂಗಣದಲ್ಲಿ ನಡೆಯಿತು.

ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ಲತೀಫ್ ದಾರಿಮಿ ರೆಂಜಾಡಿ ಅಧ್ಯಕ್ಷತೆ ವಹಿಸಿದ್ದರು. ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್‌ನ  ಪ್ರಧಾನ ಕಾರ್ಯದರ್ಶಿ ಮುಸ್ತಫಾ ಫೈಝಿ ಉದ್ಘಾಟಿಸಿದರು.

ಚುನಾವಣಾಧಿಕಾರಿಯಾಗಿ ಅಡ್ಯಾರ್ ಕಣ್ಣೂರ್ ಮದ್ರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯ ದರ್ಶಿ ಡಿ.ಅಬ್ದುಲ್ ಹಮೀದ್ ಮತ್ತು ವೀಕ್ಷಕರಾಗಿ ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್ ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ರಫೀಕ್ ಹಾಜಿ ಕೊಡಾಜೆ ಭಾಗವಹಿಸಿದ್ದರು.

ರೇಂಜ್‌ನ 2022-25ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಇಬ್ರಾಹೀಂ ಕೊಣಾಜೆ, ಪ್ರಧಾನ ಕಾರ್ಯದರ್ಶಿಯಾಗಿ ಫಾರೂಕ್ ಕಿನ್ಯಾ, ಕೋಶಾಧಿಕಾರಿಯಾಗಿ  ಮೊಹ್ದಿನ್ ಕುಂಞಿ ರಹ್ಮತ್ ನಗರ, ಉಪಾಧ್ಯಕ್ಷರಾಗಿ ಎಸ್.ಬಿ. ಹನೀಫ್, ಮೊಹ್ದಿನ್ ಬಾವು ಮರಾಠಿಮೂಲೆ, ಕಾರ್ಯದರ್ಶಿಗಳಾಗಿ ಬಶೀರ್ ಅಜ್ಜಿನಡ್ಕ, ಹಮೀದ್ ಮದ್ಪಾಡಿ, ವರ್ಕಿಂಗ್ ಕಾರ್ಯದರ್ಶಿಯಾಗಿ ಪಿ.ಎಂ. ಇಸ್ಮಾಯಿಲ್ ಪನೀರ್, ಪತ್ರಿಕಾ ಕಾರ್ಯದರ್ಶಿಯಾಗಿ - ಹಂಝ ಹನೀಫಿ, ಜಿಲ್ಲಾ ಕೌನ್ಸಿಲರ್‌ಗಳಾಗಿ ಅಬೂಸ್ವಾಲಿಹ್ ಹಾಜಿ ಮತ್ತು ಅಶ್ರಫ್ ಮರಾಠಿಮೂಲೆ  ಆಯ್ಕೆಯಾದರು.

Similar News