ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡ ಹಿರಿಯ ನಟ ಅಮೋಲ್ ಪಾಲೇಕರ್, ಸಂಧ್ಯಾ ಗೋಖಲೆ

Update: 2022-11-20 17:35 GMT

ಬುಲ್ದಾನ (ಮಹಾರಾಷ್ಟ್ರ), ನ. 20: ಬುಲ್ದಾನ ಜಿಲ್ಲೆ ಪ್ರವೇಶಿಸಿದ ‘ಭಾರತ್ ಜೋಡೊ ಯಾತ್ರೆ’ಯಲ್ಲಿ Bharat Jodo Yatra ಹಿರಿಯ ನಟ ಅಮೋಲ್ ಪಾಲೇಕರ್ Amol Palekar ಹಾಗೂ ಅವರ ಪತ್ನಿ, ಲೇಖಕಿ-ಚಿತ್ರ ನಿರ್ದೇಶಕಿ ಸಂಧ್ಯಾ ಗೋಖಲೆ Sandhya Gokhale ಪಾಲ್ಗೊಂಡಿದ್ದಾರೆ.

ಮಧ್ಯಪ್ರದೇಶ ಪ್ರವೇಶಿಸುವ ಮುನ್ನಾ ದಿನವಾದ ರವಿವಾರ ಇಲ್ಲಿ ನಡೆದ ಪಾದಯಾತ್ರೆಯಲ್ಲಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ Rahul Gandhi ಅವರೊಂದಿಗೆ ಪಾಲ್ಗೊಂಡರು.

ರಾಹುಲ್ ಗಾಂಧಿ ಅವರೊಂದಿಗೆ ಪಾಲೇಕರ್ ಹಾಗೂ ಗೋಖಲೆ  ಅವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿರುವ ಸರಣಿ ಛಾಯಾಚಿತ್ರಗಳನ್ನು ಕಾಂಗ್ರೆಸ್ ತನ್ನ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ.

‘‘ದೇಶದ ಕುರಿತು ಇರುವ ಜವಾಬ್ದಾರಿ ಅರಿತುಕೊಂಡು ಇಂದು ಜನಪ್ರಿಯ ನಟ, ನಿರ್ದೇಶಕ ಅಮೋಲ್ ಪಾಲೇಕರ್ ಅವರು ತಮ್ಮ ಪತ್ನಿಯೊಂದಿಗೆ ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.  ದೇಶದ ಪರವಾಗಿ ಧ್ವನಿ ಎತ್ತಿರುವುದಕ್ಕೆ ಅವರಿಗೆ ಧನ್ಯವಾದಗಳು’’ ಎಂದು ಕಾಂಗ್ರೆಸ್‌ನ ಟ್ವೀಟ್ ಹೇಳಿದೆ.

Similar News