ಬುಡಕಟ್ಟುಗಳ ಸಬಲೀಕರಣಕ್ಕೆ ಯುಪಿಎ ರೂಪಿಸಿದ ಕಾನೂನನ್ನು ಮೋದಿ ಸರಕಾರ ದುರ್ಬಲಗೊಳಿಸಿದೆ: ರಾಹುಲ್ ಗಾಂಧಿ

Update: 2022-11-20 17:41 GMT

ಬುಲ್ದಾನ, ನ. 20:  ಬುಡಕಟ್ಟುಗಳ ಸಬಲೀಕರಣಕ್ಕೆ ಯುಪಿಎ UPA ರೂಪಿಸಿದ ಕಾನೂನುಗಳನ್ನು ನರೇಂದ್ರ ಮೋದಿ Nrendra Modi ನೇತೃತ್ವದ ಕೇಂದ್ರ ಸರಕಾರ ದುರ್ಬಲಗೊಳಿಸಿದೆ. ಕಾಂಗ್ರೆಸ್ Congress ಪಕ್ಷ ಮತ್ತೆ ಅಧಿಕಾರಕ್ಕೆ ಬಂದರೆ ಈ ಕಾನೂನುಗಳನ್ನು ಮತ್ತೆ ಸಬಲಗೊಳಿಸಲಾಗುವುದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ Rahul Gandhi ರವಿವಾರ ಹೇಳಿದ್ದಾರೆ.

ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಜಲಗಾಂವ್-ಜಾಮೋದ್‌ನಲ್ಲಿ ಆದಿವಾಸಿ ಮಹಿಳಾ ಕಾರ್ಮಿಕರ ಸಮ್ಮೇಳನದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬುಡಕಟ್ಟು ಜನರು ಈ ದೇಶದ ಮೊದಲ ಮಾಲಕರು. ಅವರಿಗೆ  ಇತರ ನಾಗರಿಕರಂತೆ ಸಮಾನ ಹಕ್ಕುಗಳು ಇವೆ ಎಂದರು.

ಪಂಚಾಯತ್ ಕಾಯ್ದೆ, ಅರಣ್ಯ ಹಕ್ಕುಗಳ ಕಾಯ್ದೆ, ಭೂ ಕಾಯ್ದೆ, ಪಂಚಾಯತ್ ರಾಜ್ ಕಾಯ್ದೆ ಹಾಗೂ ಸ್ಥಳೀಯ ಸಂಸ್ಥ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ದುರ್ಬಲಗೊಳಿಸಿದಂತೆ ಮೋದಿ ಸರಕಾರ ಈ ಕಾನೂನನ್ನು ಕೂಡ ದುರ್ಬಲಗೊಳಿಸಿದೆ ಎಂದರು.

ಮೋದಿ ಅವರು ಬುಡಕಟ್ಟು ಜನರನ್ನು ‘ವನವಾಸಿ’ ಎಂದು ಕರೆದಿದ್ದಾರೆ. ‘ಆದಿವಾಸಿ’ ಹಾಗೂ ‘ವನವಾಸಿ’ಗೆ ಭಿನ್ನ ಅರ್ಥಗಳಿವೆ. ‘ವನವಾಸಿ’ ಎಂದರೆ ಕಾಡಿನಲ್ಲಿ ಮಾತ್ರ ವಾಸಿಸುವವರು. ನಗರಗಳಲ್ಲಿ ಅಲ್ಲ. ಆದುದರಿಂದ ನೀವು ವೈದ್ಯರು ಹಾಗೂ ಎಂಜಿನಿಯರ್ ಆಗಲು ಸಾಧ್ಯವಿಲ್ಲ. ವಿಮಾನದಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ ಎಂದರು.

ಪ್ರಧಾನಿ ಅವರು ಬುಡಕಟ್ಟು ಜನರ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು  ಬಯಸಿದ್ದಾರೆ. ಅದನ್ನು ಕೈಗಾರಿಕೋದ್ಯಮದಲ್ಲಿ ತೊಡಗಿಕೊಂಡಿರುವ ತನ್ನ  ಗೆಳೆಯರಿಗೆ ನೀಡಲು ಬಯಸಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ, ಈ ಕಾನೂನುಗಳನ್ನು ಸಬಲಗೊಳಿಸಲಿದ್ದೇವೆ ಹಾಗೂ ನಿಮ್ಮ ಕಲ್ಯಾಣಕ್ಕಾಗಿ ಹೊಸ ಕಾನೂನುಗಳನ್ನು ಜಾರಿಗೆ ತರಲಿದ್ದೇವೆ ಎಂದರು.

Similar News