×
Ad

ಮಂಗಳೂರು: ಅತಿಥಿ ಬೋಧಕರಿಂದ ಅರ್ಜಿ ಆಹ್ವಾನ

Update: 2022-11-21 19:08 IST
Editor : Ashwani

ಮಂಗಳೂರು: ನಗರದ ಕದ್ರಿ ಹಿಲ್ಸ್‌ನಲ್ಲಿರುವ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗೆ (ಪುರುಷ) 2022-23ನೇ ಶೈಕ್ಷಣಿಕ ಸಾಲಿಗೆ ಐಟಿಐ ತರಬೇತಿದಾರರಿಗೆ ಎಂಪ್ಲಾಯೇಬಲಿಟಿ ಸ್ಕಿಲ್ಸ್ ಎಂಬ ವಿಷಯ ಬೋಧಿಸಲು ಅತಿಥಿ ಬೋಧಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಎಂಬಿಎ, ಬಿಬಿಎ ಪದವಿ, ಡಿಪ್ಲೊಮಾ ಅಭ್ಯರ್ಥಿಗಳು ನ.30ರೊಳಗೆ ಸ್ವವಿವರದೊಂದಿಗೆ ಒಂದು ಸೆಟ್ ವಿದ್ಯಾರ್ಹತೆಯ ಪ್ರಮಾಣ ಪತ್ರದ ಪ್ರತಿಯನ್ನು ಸಂಸ್ಥೆಗೆ ಸಲ್ಲಿಸಬೇಕು. ಅತಿಥಿ ಬೋಧಕರಿಗೆ ಸರಕಾರಿ ಆದೇಶದಂತೆ ಗಂಟೆಗೆ 250 ರೂ. ಸಂಭಾವನೆ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಸಂಸ್ಥೆಯನ್ನು ಸಂಪರ್ಕಿಸುವಂತೆ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟನೆೆಯಲ್ಲಿ ತಿಳಿಸಿದ್ದಾರೆ.

Writer - Ashwani

contributor

Editor - Ashwani

contributor

Similar News