ಮಂಗಳೂರು: ಡಿವೈಡರ್‌ಗೆ ಸ್ಕೂಟರ್ ಢಿಕ್ಕಿ; ಸವಾರ ಮೃತ್ಯು
Update: 2022-11-21 20:08 IST
ಮಂಗಳೂರು(Mangaluru): ನಗರದ ಪದವಿನಂಗಡಿಯ ಬಳಿ ಡಿವೈಡರ್‌ಗೆ ಸ್ಕೂಟರ್ ಢಿಕ್ಕಿ (Accident) ಹೊಡೆದ ಸವಾರ ಮೃತಪಟ್ಟ ಘಟನೆ ರವಿವಾರ ಸಂಜೆ ನಡೆದಿದೆ. ಮೃತ ಸವಾರನನ್ನು ಕುಂಜತ್ತಬೈಲ್ ಸಮೀಪದ ಬಸವನಗರದ ಚಂದ್ರಶೇಖರ್‌ರ ಪುತ್ರ ಕಾಂತೇಶ (26) ಎಂದು ಗುರುತಿಸಲಾಗಿದೆ.
ಈತ ರವಿವಾರ ಸಂಜೆ ತನ್ನ ಸ್ಕೂಟರ್‌ನಲ್ಲಿ ಪದವಿನಂಗಡಿ ಕಡೆಯಿಂದ ತನ್ನ ಮನೆಗೆ ತೆರಳುತ್ತಿದ್ದಾಗ ಪದವಿನಂಗಡಿಯ ಕೊಸ್ಟಲ್ ವಿಲೇಜ್ ಹೋಟೆಲ್ ಬಳಿ ರಸ್ತೆಯ ಮಧ್ಯದಲ್ಲಿರುವ ಡಿವೈಡರ್‌ಗೆ ಢಿಕ್ಕಿ ಹೊಡೆದ ಪರಿಣಾಮ ದಾರಿದೀಪದ ಕಂಬಕ್ಕೆ ತಲೆ ಬಡಿದು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ತಕ್ಷಣ ಚಿಕಿತ್ಸೆಗಾಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಾಂತೇಶ್ ಮೃತಪಟ್ಟಿರುವುದಾಗಿ ಪ್ರಕರಣ ದಾಖಲಿಸಿಕೊಂಡಿರುವ ಸಂಚಾರ ಉತ್ತರ ಠಾಣೆಯ ಪೊಲೀಸರು ತಿಳಿಸಿದ್ದಾರೆ.