ದೇರಳಕಟ್ಟೆ: ಮಾದಕ ವ್ಯಸನದ ವಿರುದ್ಧ ಯುವ ಜನ ಜಾಗೃತಿ ಸಭೆ

Update: 2022-11-21 17:51 GMT

ದೇರಳಕಟ್ಟೆ: ಎಸ್ ಕೆ.ಎಸ್.ಎಸ್.ಎಫ್ ಕ್ಯಾಂಪಸ್ ವಿಂಗ್  ದೇರಳಕಟ್ಟೆ ಶಾಖೆಯ ವತಿಯಿಂದ ಮಾದಕ ವ್ಯಸನದ ವಿರುದ್ಧ ಯುವ ಜನ ಜಾಗ್ರತಿ ಸಭೆಯು ದೇರಳಕಟ್ಟೆ ಎಸ್.ಕೆ.ಎಸ್.ಎಸ್.ಎಫ್ ಕಚೇರಿಯಲ್ಲಿ ನಡೆಯಿತು.

ಎಸ್.ಕೆ.ಎಸ್.ಎಸ್.ಎಫ್ ದೇರಳಕಟ್ಟೆ ಶಾಖಾ ಅಧ್ಯಕ್ಷ ಫೈಝಲ್ ಡಿ.ಎಂ ರವರ  ಅದ್ಯಕ್ಷತೆ ವಹಿಸಿದ್ದರು.   ಶಂಸುಲ್ ಉಲಮಾ ದಾರುಸ್ಸಲಾಮ್ ಅಕಾಡೆಮಿ ಮಂಗಳನಗರ ಅಧ್ಯಕ್ಷ ತಬೂಕ್ ಅಬ್ದುರ್ರಹ್ಮಾನ್ ದಾರಿಮಿ ಕಾರ್ಯಕ್ರಮ ವನ್ನು  ಉದ್ಘಾಟಿಸಿದರು.

ದೇರಳಕಟ್ಟೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಆರ್ ಅಹ್ಮದ್ ಶೇಟ್,ಬೆಳ್ಮ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ಎಂ ಅಬ್ದುಲ್ ಸತ್ತಾರ್, ದೇರಳಕಟ್ಟೆ ಯೆನಪೋಯ ಮೆಡಿಕಲ್ ಕಾಲೇಜ್ ಉಪನ್ಯಾಸಕ ಅನ್ವರ್ ಮಾಸ್ಟರ್ ಮಾದಕ ವ್ಯಸನದ ಜಾಗ್ರತಿ  ಕುರಿತು ವಿಷಯ ಪ್ರಸ್ತಾಪಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬದ್ರಿಯಾ ಜುಮಾ ಮಸೀದಿ ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುಲ್ ಲತೀಫ್, ಎಸ್.ಕೆ.ಎಸ್.ಎಸ್.ಎಫ್ ಉಳ್ಳಾಲ ಕ್ಲಸ್ಟರ್ ಪ್ರಧಾನ ಕಾರ್ಯದರ್ಶಿ ಹರ್ಷಾದ್,
ಎಸ್.ಕೆ.ಎಸ್.ಎಸ್.ಎಫ್ ದೇರಳಕಟ್ಟೆ ಶಾಖೆಯ ಉಪಾಧ್ಯಕ್ಷ ಮೊಹಮ್ಮದ್ ಯಾಕೂಬ್., ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುನ್ಶಿದ್, ಮಾಜಿ ಅಧ್ಯಕ್ಷ ನಿಯಾಝ್ ಡಿ.ಎಂ ,
ಎಸ್.ಕೆ.ಎಸ್.ಎಸ್.ಎಫ್ ಕ್ಯಾಂಪಸ್ ವಿಂಗ್  ಅಧ್ಯಕ್ಷ ಮೊಹಮ್ಮದ್ ಆಶಿಕ್ ಮೊದಲಾದವರು ಉಪಸ್ಥಿತರಿದ್ದರು.

ಎಸ್.ಕೆ.ಎಸ್.ಎಸ್.ಎಫ್ ದೇರಳಕಟ್ಟೆ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ ನೌಷಾದ್ ದೇರಳಕಟ್ಟೆ ಸ್ವಾಗತಿಸಿ ಎಸ್.ಕೆ.ಎಸ್.ಎಸ್ ಎಫ್ ಕ್ಯಾಂಪಸ್ ವಿಂಗ್ ಪ್ರಧಾನ ಕಾರ್ಯದರ್ಶಿ ಅಹ್ಮದ್ ಶಮೀಮ್ ಧನ್ಯವಾದ ಸಮರ್ಪಿಸಿದರು

Similar News