ಸುಳ್ಯ: ಗೋಣಿ ಚೀಲದಲ್ಲಿ ಮಹಿಳೆಯ ಮೃತದೇಹ ಪತ್ತೆ; ಪತ್ನಿಯನ್ನು ಕೊಂದು ಪರಾರಿಯಾಗಿರುವ ಶಂಕೆ

Update: 2022-11-22 13:25 GMT

ಸುಳ್ಯ: ಮಹಿಳೆಯೋರ್ವರ ಮೃತದೇಹ ಗೋಣಿ ಚೀಲದಲ್ಲಿ ಪತ್ತೆಯಾದ ಘಟನೆ ಸುಳ್ಯದ ಬೀರಮಂಗಲದಲ್ಲಿ ನಡೆದಿದೆ.

ಸುಳ್ಯದ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದ ಪಶ್ಚಿಮ ಬಂಗಾಲ ಮೂಲದ ಇಮ್ರಾನ್ ಎಂದು ಗುರುತಿಸಲಾದ ವ್ಯಕ್ತಿಯೋರ್ವ ಬೀರಮಂಗಲದಲ್ಲಿ ಬಾಡಿಗೆ ಕೊಠಡಿಯಲ್ಲಿ ಕೆಲವು ತಿಂಗಳಿನಿಂದ ವಾಸವಿದ್ದು, ಈತ ತನ್ನ ಪತ್ನಿಯನ್ನು ಕೊಲೆ ಮಾಡಿ ಗೋಣಿಚೀಲದಲ್ಲಿ ತುಂಬಿಸಿ ಪರಾರಿಯಾಗಿರುವ ಶಂಕೆ ಪೊಲೀಸರು ವ್ಯಕ್ತಪಡಿಸಿದ್ದಾರೆ.

ಇಮ್ರಾನ್ ಎರಡು ದಿನಗಳ ಹಿಂದೆ ಊರಿಗೆ ತೆರಳುತ್ತೇನೆ ಎಂದು ಹೊಟೇಲ್ ನವರಲ್ಲಿ ಹೇಳಿ ಊರಿಗೆ ತೆರಳಿದ್ದ ಎಂದು ಹೇಳಲಾಗಿದೆ. ಇಂದು ಸಮೀಪದ ಮನೆಯವರಿಗೆ ಸಂಶಯ ಮೂಡಿ  ಪೊಲೀಸರಿಗೆ ಮಾಹಿತಿ ನೀಡಿದ್ದು, ಅವರು ಮನೆಗೆ ಬಂದು ಪರಿಶೀಲಿಸುವಾಗ ಮನೆಯೊಳಗೆ ಗೋಣಿ ಚೀಲದಲ್ಲಿ ಮೃತದೇಹ ಪತ್ತೆಯಾಗಿದೆ.

ಸುಳ್ಯ ಪೊಲೀಸರು ಸ್ಥಳ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.

ಡಿವೈಎಸ್‌ಪಿ ವೀರಯ್ಯ ಹಿರೇಮಠ್, ಸುಳ್ಯ ವೃತ್ತ ನಿರೀಕ್ಷಕ ನವೀನ್‌ ಚಂದ್ರ ಜೋಗಿ, ಎಸ್ಐ ದಿಲೀಪ್ ಜಿ.ಆರ್ ಮತ್ತಿತರರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು, ಫೋರೆನ್ಸಿಕ್ ತಜ್ಞರು ಸ್ಥಳಕ್ಕೆ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.

Similar News