×
Ad

ಅರ್ಜೆಂಟೀನಾ ವಿರುದ್ಧ ಸೌದಿ ಜಯ: ಸಂಭ್ರಮಾಚರಣೆ ನಿಮಿತ್ತ ನಾಳೆ ದೇಶಾದ್ಯಂತ ರಜೆ ಘೋಷಿಸಿದ ದೊರೆ ಸಲ್ಮಾನ್

Update: 2022-11-22 21:32 IST

ರಿಯಾದ್:‌ ಫಿಫಾ ವಿಶ್ವಕಪ್‌ ಫುಟ್ಬಾಲ್‌ ನ ಮಂಗಳವಾರ ನಡೆದ ಪಂದ್ಯಾಟದಲ್ಲಿ ಅನಿರೀಕ್ಷಿತ ಮತ್ತು ಐತಿಹಾಸಿಕವೆಂಬಂತೆ ಬಲಿಷ್ಠ ಅರ್ಜೆಂಟೀನಾದ ವಿರುದ್ಧ ಸೌದಿ ಅರೇಬಿಯಾ ಜಯ ಸಾಧಿಸಿತ್ತು.  2-1 ಅಂತರದಲ್ಲಿ ಸೌದಿ ಅರೇಬಿಯಾ ಖ್ಯಾತ ಆಟಗಾರ ಲಿಯೋನಲ್‌ ಮೆಸ್ಸಿಯ ಅರ್ಜೆಂಟೀನ ತಂಡಕ್ಕೆ ಸೋಲುಣಿಸಿತ್ತು. ಇದೀಗ ಈ ಕುರಿತ ಸಂಭ್ರಮಾಚರಣೆಗಾಗಿ ನಾಳೆ ಸೌದಿ ದೊರೆ  ಸಲ್ಮಾನ್‌ ದೇಶಾದ್ಯಂತ ರಜೆ ಘೋಷಿಸಿದ್ದಾರೆ.

"2022ರ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ವಿರುದ್ಧ ಸೌದಿ ಅರೇಬಿಯಾ ತಂಡದ ಅದ್ಭುತ ವಿಜಯದ ಸಂಭ್ರಮದಲ್ಲಿ, ನಾಳೆ, ಬುಧವಾರ, ಸಾರ್ವಜನಿಕ ಮತ್ತು ಖಾಸಗಿ ವಲಯದ ಎಲ್ಲಾ ಉದ್ಯೋಗಿಗಳಿಗೆ ಮತ್ತು ಶಿಕ್ಷಣದ ಎಲ್ಲಾ ಹಂತಗಳ ವಿದ್ಯಾರ್ಥಿಗಳಿಗೆ ರಜಾದಿನವಾಗಿದೆ ಎಂದು ರಾಜ ಸಲ್ಮಾನ್ ಆದೇಶಿಸಿದ್ದಾರೆ" ಎಂದು ಸೌದಿ ಗಝೆಟ್ ವರದಿ ಮಾಡಿದೆ.

Similar News