ಮ್ಯಾಂಚೆಸ್ಟರ್ ಯುನೈಟೆಡ್ ನಿಂದ ಕ್ರಿಸ್ಟಿಯಾನೊ ರೊನಾಲ್ಡೊ ಹೊರಕ್ಕೆ
Update: 2022-11-23 00:21 IST
ಲಂಡನ್: ತಕ್ಷಣದಿಂದಲೇ ಜಾರಿಗೆ ಬರುವಂತೆ ಪರಸ್ಪರ ಒಪ್ಪಂದದ ಮೂಲಕ ಕ್ರಿಸ್ಟಿಯಾನೋ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ತೊರೆಯುವುದನ್ನು ಖಚಿತಪಡಿಸಲಾಗಿದೆ ಎಂದು ಕ್ಲಬ್ ಮಂಗಳವಾರ ಹೇಳಿಕೆಯಲ್ಲಿ ದೃಢಪಡಿಸಿದೆ. ಬ್ರಿಟಿಷ್ ಪತ್ರಕರ್ತ ಪಿಯರ್ಸ್ ಮೋರ್ಗಾನ್ ಜೊತೆಗಿನ ಅವರ ಇತ್ತೀಚಿನ ಸಂದರ್ಶನದ ಬಗ್ಗೆ ರೊನಾಲ್ಡೊ ತೀವ್ರ ಟೀಕೆಗೆ ಒಳಗಾಗಿದ್ದಾರೆ.
ಸಂದರ್ಶನದಲ್ಲಿ, ರೊನಾಲ್ಡೊ ಹಲವಾರು ವಿಷಯಗಳ ಬಗ್ಗೆ ಕ್ಲಬ್ ಅನ್ನು ಟೀಕಿಸಿದ್ದರು. ಕೆಲವು ಕ್ಲಬ್‌ಗಳ ಮುಖ್ಯಸ್ಥರು ತನ್ನನ್ನು ಬಲವಂತವಾಗಿ ಹೊರಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದರು. ಸ್ಪೋಟಕ ಸಂದರ್ಶನದ ಪರಿಣಾಮವಾಗಿ ಯುನೈಟೆಡ್‌ನಿಂದ ರೊನಾಲ್ಡೊ ರನ್ನು ತೊರೆಯುವ ನಿರ್ಧಾರಕ್ಕೆ ಬಂದಂತೆ ತೋರುತ್ತಿದೆ ಎಂದು ವರದಿಗಳು ತಿಳಿಸಿವೆ.
ತಮ್ಮ ಹೇಳಿಕೆಯಲ್ಲಿ, ಮ್ಯಾಂಚೆಸ್ಟರ್ ಯುನೈಟೆಡ್ "ತಕ್ಷಣವೇ ಜಾರಿಗೆ ಬರುವಂತೆ ಪರಸ್ಪರ ಒಪ್ಪಂದದ ಮೂಲಕ ಕ್ರಿಸ್ಟಿಯಾನೋ ರೊನಾಲ್ಡೊ ಮ್ಯಾಂಚೆಸ್ಟರ್ ಯುನೈಟೆಡ್ ತೊರೆಯಲಿದ್ದಾರೆ" ಎಂದು ಹೇಳಿದೆ.