×
Ad

ಮೂಡುಬಿದಿರೆ | ಅನಿವಾಸಿ ಉದ್ಯಮಿ ಜಯರಾಮ ಹೆಗ್ಡೆ ನಿಧನ

Update: 2022-11-23 15:56 IST

ಮೂಡುಬಿದಿರೆ, ನ.23: ಅನಿವಾಸಿ ಉದ್ಯಮಿ ಕೊಡ್ಯಡ್ಕ ಜಯರಾಮ ಹೆಗ್ಡೆ (73)ಅನಾರೋಗ್ಯದಿಂದ ಇಂದು ಮಧ್ಯಾಹ್ನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ತನ್ನ 23ನೇ ವಯಸ್ಸಿನಲ್ಲಿ ಮಸ್ಕತ್ ಗೆ  ಅಲ್ಲಿ ಇಲೆಕ್ಟ್ರಿಕಲ್ ಹಾರ್ಡ್ ವೇರ್ ಶೋರೂಂ ಆರಂಭಿಸಿದ್ದರು. ನಂತರ ಹೋಟೇಲ್ ಉದ್ಯಮಕ್ಕೆ ಕಾಲಿರಿಸಿ ಯಶಸ್ವಿ ಉದ್ಯಮಿ ಎನಿಸಿದರು. 1996ರಲ್ಲಿ ಕೊಡ್ಯಡ್ಕದಲ್ಲಿ ಅನ್ನಪೂರ್ಣೇಶ್ವರಿ ದೇವಸ್ಥಾನವನ್ನು ಕಟ್ಟಿಸಿದರು. ಹೆಗ್ಗಡೆ ಸಮಾಜದ ಮುಂದಾಳು,  ದಾನಿಯೂ ಆಗಿದ್ದು, ಇವರ ಮುಂದಾಳತ್ವದಲ್ಲಿ ಕೋಟೆಬಾಗಿಲು ವೀರಮಾರುತಿ ದೇವಸ್ಥಾನವನ್ನು ಜೀರ್ಣೋದ್ಧಾರಗೊಳಿಸಲಾಗಿತ್ತು. ಕೆಲವು ವರ್ಷಗಳ ಹಿಂದೆ ಅಶ್ವತ್ಥಪುರದಲ್ಲಿ ದಿ ಎಸ್ಟೇಟ್ ರೆಸಾರ್ಟ್ ಆರಂಭಿಸಿದ್ದಾರೆ.

ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Similar News