×
Ad

ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದ ತಿಮಿಂಗಿಲ ಆಕಾರದ ಬೃಹತ್ ವಿಮಾನ

Update: 2022-11-23 20:55 IST

ಮುಂಬೈ: ತಿಮಿಂಗಿಲವನ್ನು ಹೋಲುವ ಸೂಪರ್ ಟ್ರಾನ್ಸ್‌ಪೋರ್ಟರ್ ಏರ್‌ಬಸ್ ಬೆಲುಗಾ (Airbus Beluga) ಮಂಗಳವಾರ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Mumbai Chhatrapati Shivaji Maharaj International Airport) ಬಂದಿಳಿದಿದೆ. ತನ್ನ ಭಾರಿ ಗಾತ್ರದಿಂದಾಗಿ ಅದು ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ಪ್ರಯಾಣಿಕರ ಗಮನವನ್ನು ತಕ್ಷಣವೇ ಸೆಳೆದಿದ್ದು, ಅದರ ಚಿತ್ರಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದೆ.

A300-600ST ಸೂಪರ್ ಟ್ರಾನ್ಸ್‌ಪೋರ್ಟರ್ ಎಂದೂ ಕರೆಯಲ್ಪಡುವ ಏರ್‌ಬಸ್ ಬೆಲುಗಾ ದೊಡ್ಡ ಏರ್ ಕಾರ್ಗೋವನ್ನು ಸಾಗಿಸಲು ಬಳಸಲಾಗುತ್ತಿದೆ. ವಿಮಾನದ ವೆಬ್‌ಸೈಟ್‌ನ ಪ್ರಕಾರ, ಈ ಸಾರಿಗೆ ವಿಮಾನಗಳು 1990 ರ ದಶಕದ ಮಧ್ಯಭಾಗದಿಂದ ಕಂಪನಿಯ ಸ್ವಂತ ಕೈಗಾರಿಕಾ ಏರ್‌ಲಿಫ್ಟ್ ಅಗತ್ಯಗಳಿಗಾಗಿ ಕಾರ್ಯನಿರ್ವಹಿಸುತ್ತಿವೆ.
ಛತ್ರಪತಿ ಶಿವಾಜಿ ಏರ್ಪೋರ್ಟ್‌ ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಈ ಬೃಹತ್ ವಿಮಾನದ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದು, “ಇದು ಎಲ್ಲರಿಗೂ ವಿಸ್ಮಯ ಉಂಟು ಮಾಡಿದೆ” ಎಂದು ಬರೆದಿದೆ.

ತಿಮಿಂಗಿಲದ ಆಕಾರದಲ್ಲಿರುವ ಮೂಗು ಹೊಂದಿರುವ ಇದು ವಿಶ್ವದ ಅತಿದೊಡ್ಡ ಸರಕು ವಿಮಾನಗಳಲ್ಲಿ ಒಂದಾಗಿದೆ. ಇದು ಬಾಹ್ಯಾಕಾಶ, ಶಕ್ತಿ, ಮಿಲಿಟರಿ, ಏರೋನಾಟಿಕ್ಸ್, ಸಮುದ್ರ ಮತ್ತು ಮಾನವೀಯ ಕ್ಷೇತ್ರಗಳನ್ನು ಒಳಗೊಂಡಂತೆ ವಿವಿಧ ವಲಯಗಳಿಗೆ ದೊಡ್ಡ ಸರಕು ಸಾರಿಗೆಗೆ ಬಳಸಲ್ಪಡುತ್ತಿದೆ. ವಿಮಾನದ ವೆಬ್‌ಸೈಟ್ ಪ್ರಕಾರ ವಿಮಾನವು 56 ಮೀಟರ್ ಉದ್ದ ಮತ್ತು 45 ಮೀಟರ್ ಅಗಲವಿದೆ.

ಇದನ್ನೂ ಓದಿ: ದುಬೈನಲ್ಲಿ ನಿರ್ಮಾಣವಾಗಲಿದೆ ವಜ್ರಾಕಾರದ ವಿಶ್ವದ ಅತಿ ಎತ್ತರದ ವಸತಿ ಕಟ್ಟಡ

Similar News