ಪಾದುವ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್: ವಿದ್ಯಾರ್ಥಿ ಸಂಘ ಉದ್ಘಾಟನೆ
ಮಂಗಳೂರು, ನ.23; ಪಾದುವ ಕಾಲೇಜಿನ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಂಘವನ್ನು ದೇರೆಬೈಲು ಚರ್ಚ್ ನ ಧರ್ಮ ಗುರುಗಳಾದ ವಂ.ಜೋಸೆಫ್ ಮಾರ್ಟೀಸ್ ಉದ್ಘಾಟಿಸಿ ವಿದ್ಯಾರ್ಥಿ ಸಂಘದ ಮಹತ್ವ ಮತ್ತು ಜವಾಬ್ದಾರಿಯನ್ನು ವಿವರಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕರಾದ ವಂದನಿಯ ಗುರುಗಳಾದ ವಿನ್ಸೆಂಟ್ ಮೊಂತೆರೊ ರವರು ವಹಿಸಿದ್ದರು. ವೇದಿಕೆಯಲ್ಲಿ ದೇವಿಪ್ರಸಾದ್ ವಿಶೇಷ ಅಧಿಕಾರಿ ಕಾಲೇಜು ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ ಮತ್ತು ಸ್ಟಿಫನ್ ಪಿಂಟೋ ಉಪಾಧ್ಯಕ್ಷರು ಬೆಂದೂರ್ ಚರ್ಚ್ ಪಾಲನ ಮಂಡಳಿ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಗುರುಗಳು ಅರುಣ್ ವಿಲ್ಸನ್ ಲೋಬೊ ರವರು ಸ್ವಾಗತಿಸಿದರು. ಕಾಲೇಜಿನ ಉಪ ಪ್ರಾಂಶುಪಾಲರಾದ ಪ್ರೊ. ರೋಶನ್ ಸಂತುಮೋಯೆರ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಲಪತಿ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ವಿದ್ಯಾರ್ಥಿ ಸಂಘದ ನಿರ್ದೇಶಕರಾದ ಝೀನಾ ಮತ್ತು ಅಕ್ಷತಾ ಕಾರ್ಯಕ್ರಮ ಆಯೋಜಿಸಿದ್ದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಐಶಾಲ್ ಮೊಂತೆರೊ ಧನ್ಯವಾದವಿತ್ತು ವಿದ್ಯಾರ್ಥಿಗಳಾದ ಮೇಘನಾ ಮತ್ತು ಸೇಲ್ವಿನೋ ಕಾರ್ಯಕ್ರಮ ನಿರೂಪಿಸಿದರು