ಭಾರತೀಯ ಪಾಸ್‍ಪೋರ್ಟ್‍ನಲ್ಲಿ ಒಂದೇ ಹೆಸರಿದ್ದರೆ ಯುಎಇ ಪ್ರವೇಶಕ್ಕೆ ಅವಕಾಶವಿಲ್ಲ

Update: 2022-11-24 18:01 GMT

ಅಬುಧಾಬಿ, ನ.24: ಪ್ರವಾಸೀ ವೀಸಾ, ವಿಸಿಟಿಂಗ್ ವೀಸಾ ಅಥವಾ ಇನ್ಯಾವುದೇ ರೀತಿಯ ವೀಸಾ ಹೊಂದಿರುವ ಪ್ರಯಾಣಿಕರ ಪಾಸ್‍ಪೋರ್ಟ್‍ (Passport)ನಲ್ಲಿ ಒಂದೇ ಹೆಸರಿದ್ದರೆ ಅವರಿಗೆ ಸೋಮವಾರದಿಂದ ಜಾರಿಗೆ ಬರುವಂತೆ ಯುಎಇ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ಯುಎಇ ಅಧಿಕಾರಿಗಳು ವ್ಯಾಪಾರ ಪಾಲುದಾರ ಇಂಡಿಗೊ ಏರ್‍ಲೈನ್ಸ್‍(Indigo Airlines)ಗೆ ತಿಳಿಸಿದ್ದಾರೆ.

ಇದರರ್ಥ, ಪಾಸ್‍ಪೋರ್ಟ್‍ನಲ್ಲಿ ಪ್ರಥಮ ಹೆಸರು ಮತ್ತು ಕಡೆಯ ಹೆಸರು ಎರಡನ್ನೂ ಸ್ಪಷ್ಟವಾಗಿ ಘೋಷಿಸಬೇಕು. ಆದರೂ, ಪಾಸ್‍ಪೋರ್ಟ್‍ನಲ್ಲಿ ಒಂದು ಹೆಸರು ಮಾತ್ರವಿರುವ  ಮತ್ತು ನಿವಾಸ ಪರವಾನಿಗೆ ಅಥವಾ ಪರ್ಮನೆಂಟ್ ವೀಸಾ ಹೊಂದಿರುವ ಪ್ರಯಾಣಿಕರು ಅದೇ ಹೆಸರನ್ನು  `ಮೊದಲ ಹೆಸರು' (``first name'')ಮತ್ತು `ಉಪನಾಮ' (`surname')ಕಾಲಂನಲ್ಲಿ ನವೀಕರಿಸಿದರೆ ಪ್ರಯಾಣಿಸಲು ಅನುಮತಿಸಲಾಗುವುದು. 2022ರ ನವೆಂಬರ್ 21ರಿಂದ ಈ ನಿಯಮ ಜಾರಿಗೆ ಬಂದಿದೆ  ಎಂದು ಯುಎಇ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಹೆಚ್ಚಿನ ಮಾಹಿತಿಗೆ ಸಂಸ್ಥೆಯ ಅಕೌಂಟ್ಸ್ ಮ್ಯಾನೇಜರ್‍ರನ್ನು ಸಂಪರ್ಕಿಸಲು ಅಥವಾ ವೆಬ್‍ಸೈಟ್ `ಗೋಇಂಡಿಗೊ ಡಾಟ್‍ಕಾಮ್'(``GoIndigo.com'')ಗೆ ಭೇಟಿ ನೀಡುವಂತೆ ಇಂಡಿಗೊ ಏರ್‍ಲೈನ್ಸ್ ತಿಳಿಸಿದೆ. 

Similar News