ಕೆನರಾ ಕಾಲೇಜಿನಲ್ಲಿ ‘ಫೂಟ್‌ಪ್ರಿಂಟ್’ ಕಾರ್ಯಕ್ರಮ

Update: 2022-11-25 13:21 GMT

ಮಂಗಳೂರು: ನಗರದ ಕೆನರಾ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯಮಟ್ಟದಲ್ಲಿ ವಿವಿಧ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ಆಯೋಜಿಸಲಾದ ‘ಫೂಟ್‌ಪ್ರಿಂಟ್-2022’ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿದರು.

ನಿಟ್ಟೆ ವಿವಿ ಉಪಕುಲಾಧಿಪತಿ ಪ್ರೊ.ಎಂ.ಎಸ್.ಮೂಡಿತ್ತಾಯ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೆನರಾ ಪದವಿ ಪೂರ್ವ ಕಾಲೇಜು ಸದಾ ಪ್ರೋತ್ಸಾಹ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆಯನ್ನು ನೀಡುತ್ತದೆ. ಕಾಲೇಜಿನ ಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಕನಸಿನ ಕೂಸಾದ ಈ ಸಂಸ್ಥೆಯು ಬೆಳೆದು ನಿಂತ ರೀತಿ ಎಲ್ಲರಿಗೂ ಹೆಮ್ಮೆಯ ವಿಚಾರ ಎಂದರು.

ಕೆನರಾ ಸಮೂಹ ಶಿಕ್ಷಣ ಸಂಸ್ಥೆಯ ಜೊತೆ ಕಾರ್ಯದರ್ಶಿ ಹಾಗೂ ಕೆನರಾ ಪದವಿ ಪೂರ್ವ ಕಾಲೇಜಿನ ಸಂಚಾಲಕ ಟಿ. ಗೋಪಾಲಕೃಷ್ಣ ಶೆಣೈ ಮಾತನಾಡಿದರು.

ಕೆನರಾ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ. ರಂಗನಾಥ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಡೀನ್ ಗೋಪಾಲಕೃಷ್ಣ ಶೆಟ್ಟಿ ಹಾಗೂ ಪ್ರಾಂಶುಪಾಲೆ ಲತಾಮಹೇಶ್ವರಿ ಕೆ.ಬಿ. ಉಪಸ್ಥಿತರಿದ್ದರು.

ಫೂಟ್‌ಪ್ರಿಂಟ್‌ನ ಸಂಯೋಜಕಿ ಸುಜಾತಾ ಪಿ.ವಿ. ಸ್ವಾಗತಿಸಿದರು. ರಾಖಿ ನಾಯರ್ ಅತಿಥಿಗಳನ್ನು ಪರಿಚಯಿಸಿ ದರು. ಹೇಮಲತಾ ವಂದಿಸಿದರು. ಪ್ರಿಯಾಂಕಾ ಬೇಕಲ್ ಕಾರ್ಯಕ್ರಮ ನಿರೂಪಿಸಿದರು.

Similar News