ಮಹಿಳಾ ದೌರ್ಜನ್ಯ ನಿವಾರಣಾ ದಿನಾಚರಣೆ

Update: 2022-11-25 13:30 GMT

ಮಂಗಳೂರು: ಶಿಕ್ಷಣ ಸಚಿವಾಲಯದ ನಿರ್ದೇಶನದಂತೆ ‘ಲಿಂಗ ಸಂವೇದನೆ ಕುರಿತು ತರಬೇತಿ’ ಶೀರ್ಷಿಕೆಯಡಿ ಮಹಿಳೆಯರ ವಿರುದ್ಧ ನಡೆಯುವ ದೌರ್ಜನ್ಯವನ್ನು ಖಂಡಿಸಿ ಎನ್‌ಐಟಿಕೆಯಲ್ಲಿ ಶುಕ್ರವಾರ ಅಂತರ್‌ ರಾಷ್ಟ್ರೀಯ ಮಹಿಳಾ ದೌರ್ಜನ್ಯ ನಿವಾರಣಾ ದಿನ ಆಚರಿಸಲಾಯಿತು.

ಎನ್‌ಐಟಿಕೆ ಪ್ರಧಾರ ನಿರ್ದೇಶಕ ಪ್ರೊ.ಜಿ.ಸಿ.ಮೋಹನ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮ ದಲ್ಲಿ ಎನ್‌ಐಟಿಕೆ ರಿಜಿಸ್ಟ್ರಾರ್, ಡೀನ್‌ಗಳು, ವಿಭಾಗಗಳ ಮುಖ್ಯಸ್ಥರು ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಚೆನ್ನೈಯ ಐಸಿಸಿ-ಎಸ್‌ಎಚ್-ವಿಐಟಿ ಅಧ್ಯಕ್ಷ ಪ್ರೊ.ವಿಜಯಲಕ್ಷ್ಮಿವಿ. ಭಾಗವಹಿಸಿದ್ದರು.

ಕಾರ್ಯಕ್ರಮವು ಡಿಸೆಂಬರ್ 10ರವರೆಗೆ ನಡೆಯಲಿದೆ. ಎನ್‌ಐಟಿಕೆಯ ಆಂತರಿಕ ದೂರು ಸಮಿತಿಯ ಅಧ್ಯಕ್ಷೆ ಡಾ.ಶೀನಾ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಸಂಯೋಜಕರಾಗಿ ಪ್ರೊ. ಅನ್ನಪ ಬಿ, ಡಾ.ಸೆಂಥಿಲ್ ತಿಲಕ್, ಡಾ.ಖ್ಯಾತಿ ವರ್ಮಾ, ಮುರುಗವೇಲು ಡಿ, ವಿಲ್ಮಾ ಐರಿನ್ ಪಿಂಟೋ ಸಹಕರಿಸಿದ್ದರು.

Similar News