ತಲಪಾಡಿ: ಫಲಾಹ್ ಕಾಲೇಜಿನಲ್ಲಿ ವ್ಯಕ್ತಿತ್ವ ವಿಕಸನ ಕಾರ್ಯಗಾರ

Update: 2022-11-25 13:33 GMT

ಮಂಗಳೂರು : ತಲಪಾಡಿ ಕೆ.ಸಿ.ರೋಡ್‌ನ ವಿದ್ಯಾನಗರದ ಫಲಾಹ್ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಎರಡು ದಿವಸಗಳ ವ್ಯಕ್ತಿತ್ವ ವಿಕಸನ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಗಾರ ನಡೆಯಿತು.

ಎಂಎಸ್‌ಎನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್‌ನ ಅಸೋಸಿಯೇಟ್ ಪ್ರೊಫೆಸರ್ ಹಾಗೂ ವಿಭಾಗೀಯ ಮುಖ್ಯಸ್ಥ ಮತ್ತು ಡಾ. ಶರಣ್ ಕುಮಾರ್ ಶೆಟ್ಟಿ ಕಾರ್ಯಗಾರ ಉದ್ಘಾಟಿಸಿದರು. ಫಲಾಹ್ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿ ಹಾಜಿ ಅರಬಿ ಕುಂಞಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಗಾರದಲ್ಲಿ ಯೆನಪೋಯ ಕಾಲೇಜಿನ ಉಪನ್ಯಾಸಕ ಅಬೂಬಕರ್, ದ.ಕ.ಜಿಪಂ ನೀರು ಮತ್ತು ಸ್ವಚ್ಛತಾ ವಿಭಾಗದ ಕಮ್ಯೂನಿಟಿ ಆರ್ಗನೈಸರ್ ಕ್ಷಮಾ ಶೆಟ್ಟಿ, ಕುಂದಾಪುರದ ಆಯುಷ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಶಿಲ್ಪ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ತಲಪಾಡಿ ಇಸ್ಮಾಯಿಲ್ ಪ್ರಾಸ್ತವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕೋಶಾಧಿಕಾರಿ ಹಾಜಿ ಕೆ.ಎಂ. ಅಬ್ಬಾಸ್ ಮಜಲ್ ಮತ್ತು ಕಾಲೇಜು ವಿದ್ಯಾರ್ಥಿ ನಾಯಕಿ ದೀಕ್ಷಿತಾ ಶಿಲ್ಪಾಉಪಸ್ಥಿತರಿದ್ದರು.

ಸಂಸ್ಥೆಯ ಪ್ರಾಂಶುಪಾಲ ಅಬ್ದುಲ್ ಖಾದರ್ ಹುಸೈನ್ ಪಡುಬಿದ್ರಿ ಸ್ವಾಗತಿಸಿದರು. ಉಪನ್ಯಾಸಕಿಯರಾದ ರೇವತಿ ಎನ್ ರೈ, ಆಶಾ ಅಫೀಫಾ ಫರ್ವೀನ್, ಜೀವಿತಾ ಶೆಟ್ಟಿ ಮತ್ತು ಶ್ವೇತಾ ರಾಜೇಶ್ ಸಹಕರಿಸಿದ್ದರು.

Similar News