ಉಡುಪಿ: ವೃದ್ಧೆಯ ಚಿನ್ನಾಭರಣ ಕಳವು; ಹೋಮ್ ನರ್ಸ್ ಬಂಧನ

Update: 2022-11-25 14:46 GMT

ಉಡುಪಿ, ನ. 25: ವೃದ್ಧೆಯೊಬ್ಬರ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಆರೈಕೆಗಾಗಿ ನೇಮಕ ಮಾಡಿದ್ದ ಹೋಮ್ ನರ್ಸ್‌ಳನ್ನು ಪೊಲೀಸರು ನ.24ರಂದು ಉಡುಪಿಯಲ್ಲಿ ಬಂಧಿಸಿದ್ದಾರೆ.

ಬಾಗಲಕೋಟೆ ಮೂಲದ ರೇಖಾ ಹೆಬ್ಬಳ್ಳಿ ಬಂಧಿತ ಆರೋಪಿ.

ಉಡುಪಿ ಉಷಾ ಮ್ಯಾರೇಜ್ ಬ್ಯುರೋ ಜಾಬ್ ಲಿಂಕ್ಸ್ ಏಜೆನ್ಸಿ ಮೂಲಕ ಹೋಂ ನರ್ಸ್ ಕೆಲಸಕ್ಕೆ ರೇಖಾ ಹೆಬ್ಬಾಳ್ಳಿಯನ್ನು ಹಿರಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಚೆನ್ನಿಬೆಟ್ಟು ಮದಗ ನಿವಾಸಿ ವಯೋ ವೃದ್ದೇ ಸರಸ್ವತಿ (98) ಎಂಬವರ ಆರೈಕೆಗೆ ನೇಮಿಸಿಕೊಳ್ಳಲಾಗಿತ್ತು.

ಕೆಲವು ದಿನಗಳ ಕಾಲ ಕೆಲಸ ಮಾಡಿದ ಈಕೆ ನ.21ರಂದು ಮನೆಯಲ್ಲಿ ಯಾರೂ ಇಲ್ಲದ ಸಮಯ ಸರಸ್ವತಿರವರ ಕುತ್ತಿಗೆಯಲ್ಲಿದ್ದ ಸುಮಾರು 1.45 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿದ್ದಾರೆನ್ನ ಲಾಗಿದೆ. ಈ ಬಗ್ಗೆ ಸಂಶಯದ ಮೇಲೆ ಸರಸ್ವತಿ ಮಗ ವಸಂತ ಶೆಟ್ಟಿ ನ.24ರಂದು ನೀಡಿದ ದೂರಿನ ಮೇರೆಗೆ ಹಿರಿಯಡ್ಕ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಅದೇ ದಿನ ಆರೋಪಿ ರೇಖಾ ಹೆಬ್ಬಳ್ಳಿ ಯನ್ನು ಉಡುಪಿಯಲ್ಲಿ ವಶಕ್ಕೆ ಪಡೆದು ಕಳವುಗೈದ ಸೊತ್ತುಗಳನ್ನು ವಶಪಡಿಸಿ ಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಹೋಂ ನರ್ಸಿಂಗ್ ಏಜೆನ್ಸಿಗಳು ಕೆಲಸಕ್ಕೆ ನೇಮಿಸುವರ ಬಗ್ಗೆ ಯಾವುದೇ ಪೂರ್ವಪರ ಮಾಹಿತಿಯನ್ನು ಪಡೆಯದೆ ನಿರ್ಲಕ್ಷ್ಯತನದಿಂದ ನೇಮಿಸುವುರಿಂದ ಈ ರೀತಿಯ ಕೃತ್ಯಗಳು ನಡೆಯುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಉಡುಪಿ ಎಸ್ಪಿ ಹಾಕೆ ಅಕ್ಷಯ ಎಂ., ಹೆಚ್ಚುವರಿ ಎಸ್ಪಿ ಸಿದ್ದಲಿಂಗಪ್ಪ ಮಾರ್ಗ ದರ್ಶನದಲ್ಲಿ, ಉಡುಪಿ ಡಿವೈಎಸ್ಪಿ ಸುಧಾಕರ ನಾಯ್ಕ್, ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಅನಂತ ಪದ್ಮನಾಭ ನೇತೃತ್ವದಲ್ಲಿ ಹಿರಿಯಡ್ಕ ಪೊಲೀಸ್ ಠಾಣಾ ಎಸ್ಸೈ ಅನಿಲ್ ಬಿ.ಎಂ., ಸಿಬ್ಬಂದಿ ಎಎಸ್ಸೈ ಜಯಂತ, ಸುಂದರ್, ಎಚ್.ಸಿ. ದಯಾನಂದ ಪ್ರಭು, ರಘು, ರಾಘವೇಂದ್ರ, ಕಾಮತ್, ಪಿ.ಸಿ.ಆದರ್ಶ, ಭೀಮಪ್ಪ, ನಿತಿನ್, ನಬಿ, ಕಾರ್ತಿಕ, ರಾಜೇಶ್ವರಿ, ಸುರೇಖಾ, ಜ್ಯೋತಿ ನಾಗರತ್ನಾ, ಸುಮಲತಾ, ಜಯಲಕ್ಷ್ಮೀ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Similar News