ಬೆಂಕಿ ಅಕಸ್ಮಿಕ: ಗಾಯಾಳು ಮಹಿಳೆ ಮೃತ್ಯು

Update: 2022-11-25 14:53 GMT

ಕೋಟ, ನ.25: ಬೆಂಕಿ ಅಕಸ್ಮಿಕದಿಂದ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ನಾಗವೇಣಿ (84) ಎಂದು ಗುರುತಿಸಲಾಗಿದೆ. ಇವರು ನ.19 ರಂದು ಸಂಜೆ ಮನೆಯ ಬಳಿಯಲ್ಲಿರುವ ದೈವಸ್ಥಾನದಲ್ಲಿ ದೇವರಿಗೆ ದೀಪ ಇಡುವಾಗ ಆಕಸ್ಮಿಕವಾಗಿ ಬೆಂಕಿ ಸೀರೆಗೆ ತಗುಲಿ ಸುಟ್ಟ ಗಾಯಗೊಂಡಿದ್ದರು.  ಇದರಿಂದ ಗಂಭೀರ ಸ್ಥಿತಿಯಲ್ಲಿದ್ದ ಅವರು, ನ.24ರಂದು ಸಂಜೆ ಚಿರಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆ ಯಲ್ಲಿ ಮೃತಪಟ್ಟರು. ಈ ಬಗ್ಗೆ ಕೋಟ  ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News