ಅತ್ಯಾಚಾರ ಪ್ರಕರಣ: ಪಾಪ್ ಗಾಯಕ ಕ್ರಿಸ್ ಗೆ 13 ವರ್ಷ ಜೈಲುಶಿಕ್ಷೆ

Update: 2022-11-25 16:17 GMT

ಬೀಜಿಂಗ್, ನ.25: ಚೀನಾ ಮೂಲದ ಕೆನಡಾ(Canada)ದ ಪಾಪ್ ಗಾಯಕ ಕ್ರಿಸ್ ವು(Chris) ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾಗಿರುವುದರಿಂದ 13 ವರ್ಷ ಜೈಲುಶಿಕ್ಷೆ ವಿಧಿಸಿರುವುದಾಗಿ ಚೀನಾದ ನ್ಯಾಯಾಲಯ ಘೋಷಿಸಿದೆ.

ಜತೆಗೆ, ವೈಯಕ್ತಿಕ ಆದಾಯದ ಬಗ್ಗೆ ಮಾಹಿತಿ ನೀಡದೆ ತೆರಿಗೆ ವಂಚಿಸಿದ ಪ್ರಕರಣದಲ್ಲೂ ಆತ ದೋಷಿಯಾಗಿರುವುದರಿಂದ 83.77 ದಶಲಕ್ಷ ಡಾಲರ್ ದಂಡ ಪಾವತಿಸುವಂತೆಯೂ ನ್ಯಾಯಾಲಯ ಆದೇಶಿಸಿದೆ. 

2020ರ ನವೆಂಬರ್ನಿಂದ ಡಿಸೆಂಬರ್ ಅವಧಿಯಲ್ಲಿ ವು 3 ಮಹಿಳೆಯರನ್ನು ಅತ್ಯಾಚಾರ ಮಾಡಿರುವುದು ತನಿಖೆಯಿಂದ ಸಾಬೀತಾಗಿದೆ ಎಂದು ಬೀಜಿಂಗ್ ನ ಚವೊಯಾಂಗ್ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ. ಕೆನಡಾದ ಪಾಪ್ ಗಾಯನ ತಂಡ ಕೆ-ಪಾಪ್ನ ಸದಸ್ಯನಾಗಿದ್ದ ವು 2014ರಲ್ಲಿ ಚೀನಾಕ್ಕೆ ಹಿಂತಿರುಗಿದ್ದು ಅಲ್ಲಿಯೇ ತನ್ನ ವೃತ್ತಿಜೀವನ ಮುಂದುವರಿಸಲು ನಿರ್ಧರಿಸಿದ್ದ.

 ಆದರೆ ಆತ ತನ್ನ ಹಾಗೂ ಇತರ ಹುಡುಗಿಯರ ಮೇಲೆ ಅತ್ಯಾಚಾರ ಎಸಗಿರುವುದಾಗಿ 18 ವರ್ಷದ ಯುವತಿ ಸಾರ್ವಜನಿಕವಾಗಿ ಆರೋಪಿಸಿದ ಬಳಿಕ ಆತನನ್ನು ಅಧಿಕಾರಿಗಳು ಬಂಧಿಸಿ ಪ್ರಕರಣ ದಾಖಲಿಸಿದ್ದರು. 

Similar News