ಉಳ್ಳಾಲ ದರ್ಗಾ: ಮಹಾಸಭೆಗೆ ಸದಸ್ಯತ್ವ ನೋಂದಣಿಗೆ ಅಧಿಸೂಚನೆ ಪ್ರಕಟ

Update: 2022-11-25 17:01 GMT

ಮಂಗಳೂರು : ಉಳ್ಳಾಲ ಜುಮಾ ಮಸೀದಿ ಮತ್ತು ಹಝ್ರತ್ ಸೈಯದ್ ಮದನಿ ದರ್ಗಾದ ನೂತನ ಕಾರ್ಯಕಾರಿ ಸಮಿತಿಯ ರಚನೆಗೆ ಸಂಬಂಧಿಸಿ ಮಹಾಸಭೆಯ ಸದಸ್ಯತ್ವ ನೋಂದಣಿಗಾಗಿ ಅಧಿಸೂಚನೆ ಪ್ರಕಟಿಸಲಾಗಿದೆ ಎಂದು ನೋಂದಣಿ ಅಧಿಕಾರಿಯಾಗಿ ರಾಜ್ಯ ವಕ್ಫ್ ಬೋರ್ಡ್‌ನಿಂದ ನೇಮಿಸಲ್ಪಟ್ಟ ದ.ಕ.ಜಿಲ್ಲಾ ವಕ್ಫ್ ಅಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಹಾಸಭೆಗೆ ಸದಸ್ಯತ್ವ ಪಡೆಯುವುದಕ್ಕಾಗಿ ಹೆಸರು ನೋಂದಾಯಿಸಲು ಮತ್ತು ನವೀಕರಿಸುವುದಕ್ಕಾಗಿ ಡಿಸೆಂಬರ್ 20ರವರೆಗೆ (ಪೂ.11ರಿಂದ ಸಂಜೆ 5) ಅರ್ಜಿ ವಿತರಿಸಲಾಗುತ್ತದೆ. ಭರ್ತಿ ಮಾಡಿದ ಅರ್ಜಿಯನ್ನು ಡಿಸೆಂಬರ್ 21ರವರೆಗೆ (ಪ್ರತೀ ದಿನ ಪೂ.11ರಿಂದ ಸಂಜೆ 5) ಸ್ವೀಕರಿಸಲಾಗುತ್ತದೆ.

2023ರ ಜನವರಿ 10ರಂದು ಮಹಾಸಭೆಯ ಸದಸ್ಯರ ಕರಡು ಪ್ರತಿಯನ್ನು ಪ್ರಕಟಿಸಲಾಗುವುದು. ಮಹಾಸಭೆಯ ಸದಸ್ಯರ ಕರಡು ಪ್ರತಿ ಬಗ್ಗೆ ಆಕ್ಷೇಪಣೆ ಮತ್ತು ಸಲಹೆಗಳನ್ನು ಸಲ್ಲಿಸಲು ಜನವರಿ 12ರಿಂದ 16ರವರೆಗೆ (ಪೂ.11ರಿಂದ ಮಧ್ಯಾಹ್ನ 1ರೊಳಗೆ) ಅವಕಾಶ ಕಲ್ಪಿಸಲಾಗಿದೆ. ಆಕ್ಷೇಪಣೆ/ಸಲಹೆಗಳ ಅರ್ಜಿಗಳ ವಿಚಾರಣೆಯನ್ನು ಜನವರಿ 18ರಂದು ಪೂ.11:30ಕ್ಕೆ ನಡೆಸಲಾಗುವುದು. ಜನವರಿ 24ರಂದು ಮಹಾಸಭೆ ಸದಸ್ಯರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗುವುದು.

ಹಾಗಾಗಿ 31.10.2022ಕ್ಕೆ 18 ವರ್ಷ ಪ್ರಾಯ ತುಂಬಿದ ಸದಸ್ಯತ್ವ ಪಡೆಯಲು ಇಚ್ಚೆಯುಳ್ಳ ಮುಸ್ಲಿಂ ಪುರುಷರು ಸದಸ್ಯತ್ವ ಶುಲ್ಕ 100 ರೂ.ಹಾಗೂ ವಾರ್ಷಿಕ ಚಂದಾ 600 ರೂ. (ಒಟ್ಟು 700 ರೂ.) ಪಾವತಿಸಿ ಮಹಾಸಭೆಯ ಸದಸ್ಯತ ಪಡೆಯಬಹುದು.

ಅರ್ಜಿಗಳನ್ನು ಜಿಲ್ಲಾ ವಕ್ಫ್ ಕಚೇರಿ, ಅಲ್ಪಸಂಖ್ಯಾತರ ಕಲ್ಯಾಣ ಭವನದ 2ನೇ ಮಹಡಿ, ಓಲ್ಡ್‌ಕೆಂಟ್ ರಸ್ತೆ, ಪಾಂಡೇಶ್ವರ, ಮಂಗಳೂರು ಇಲ್ಲಿಂದ ಪಡೆಯಬಹುದು. ಮಾಹಿತಿಗಾಗಿ ದ.ಕ.ಜಿಲ್ಲಾ ವಕ್ಫ್ ಅಧಿಕಾರಿಯನ್ನು (ದೂ.ಸಂ: 9986468198) ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Similar News