ಡೀಗೊ ಮರಡೋನ ಅಗಲಿ 2 ವರ್ಷ: ಫಿಫಾ ವಿಶ್ವಕಪ್ ನಲ್ಲಿ ಶ್ರದ್ಧಾಂಜಲಿ

Update: 2022-11-25 17:31 GMT

ದೋಹಾ, ನ. 25: ಡೀಗೊ ಮರಡೋನರ ಎರಡನೇ ಪುಣ್ಯತಿಥಿಯ ಸಂದರ್ಭದಲ್ಲಿ, ಖತರ್ ವಿಶ್ವಕಪ್ ನಲ್ಲಿ ನೆರೆದಿರುವ ಅವರ ಮಾಜಿ ಸಹ ಆಟಗಾರರು ಶುಕ್ರವಾರ ಅಗಲಿದ ಫುಟ್ಬಾಲ್ ಮಾಂತ್ರಿಕನಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಫುಟ್ಬಾಲ್ ಇತಿಹಾಸದ ಅತ್ಯಂತ ಶ್ರೇಷ್ಠ ಆಟಗಾರರ ಪೈಕಿ ಒಬ್ಬರೆಂದು  ಪರಿಗಣಿಸಲ್ಪಟ್ಟಿರುವ ಮರಡೋನ 2020 ನವೆಂಬರ್ 25ರಂದು ತನ್ನ 60ನೇ ವರ್ಷದಲ್ಲಿ ನಿಧನರಾಗಿದ್ದಾರೆ.

ಅವರು ದೈಹಿಕವಾಗಿ ಮರೆಯಾಗಿರುವರಾದರೂ,  ಅರ್ಜೆಂಟೀನಾದ  ಫುಟ್ಬಾಲ್  ಅಭಿಮಾನಿಗಳ  ಮನದಲ್ಲಿ ಅವರು  ಅಚ್ಚಳಿಯದೆ  ಉಳಿದಿದ್ದಾರೆ.  ಅವರ  ಅಭಿಮಾನಿಗಳು  ಈಗಲೂ  ಅವರ  ಜರ್ಸಿಯನ್ನು  ಧರಿಸುತ್ತಾರೆ ಹಾಗೂ 1986 ರ  ವಿಶ್ವಕಪ್ ನಲ್ಲಿ ಇಂಗ್ಲೆಂಡ್  ವಿರುದ್ಧ ದ  ಕ್ವಾಟರ್   ಪೈನಲ್ ನಲ್ಲಿ ಅವರ  ‘ದೇವರ  ಕೈಯ’ ಗೋಲಿ ನ  ಬಗ್ಗೆ  ಹಾಡುಗಳನ್ನು  ಹಾಡುತ್ತಾರೆ.

ಮಧ್ಯ  ದೋಹಾ ದಲ್ಲಿ ರುವ ‘ಕಾನ್ಮೆಬೊಲ್  ಟ್ರೀ  ಆಪ್  ಡ್ರೀಮ್ಸ್’ ಎಂಬ  ಸ್ಥಳದಲ್ಲಿ,  ಫಿಫಾ  ಅಧ್ಯಕ್ಷ  ಗಿಯಾನಿ ಇನ್ಫ್ಯಾಂಟಿನೊ  ಮರಡೋನರ  ಮಾಜಿ  ಸಹ  ಆಟಗಾರರನ್ನು  ಭೇಟಿಯಾಗಿ  ಮರಡೋನ  ಬಗ್ಗೆ ಮಾತನಾಡಿದರು.  ಈ  ಸಂದರ್ಭದಲ್ಲಿ  ಸಹ  ಆಟಗಾರರು  ಒಬ್ಬರ ನಂತರ  ಒಬ್ಬರಂತೆ  ಮರಡೋನರ ಶ್ರೇಷ್ಠತೆ ಯ ಬಗ್ಗೆ ಮಾತ ನಾಡಿದರು.

‘‘ನಾವು  ಡೀಗೊ ಅವರಿಗೆ  ಶ್ರದ್ಧಾಂಜಲಿ  ಮಾತ್ರ  ಸಲ್ಲಿಸುವುದಲ್ಲ, ಅವರ  ಪರಂಪರೆ ಯನ್ನೂ ಸಂಭ್ರಮಿಸಬೇಕು’’ ಎಂದು ಇನ್ಫ್ಯಾಂಟಿನೊ ಹೇಳಿದರು.

Similar News