ಮಂಗಳೂರು: ಎಂಸಿಸಿ ಬ್ಯಾಂಕ್ ವತಿಯಿಂದ 93 ಕುಟುಂಬಗಳಿಗೆ ದತ್ತಿನಿಧಿ ವಿತರಣೆ

ಎಂಸಿಸಿ ಬ್ಯಾಂಕಿನ 110ನೆ ವರ್ಷಾಚರಣೆ ಪ್ರಯುಕ್ತ ಕಾರ್ಯಕ್ರಮ

Update: 2022-11-26 14:09 GMT

ಮಂಗಳೂರು, ನ.26: ಕಷ್ಟದಲ್ಲಿರುವ ಯಾರೇ ಆದರು ಅವರ ಬಳಿಗೆ ತೆರಳಿ ನೆರವು ನೀಡುವ ಸಂಸ್ಕೃತಿ ದ.ಕ. ಜಿಲ್ಲೆಯಲ್ಲಿದೆ ಎಂದು ಜೆಪ್ಪು ಸೆಮಿನರಿಯ ಆಡಳಿತಾಧಿಕಾರಿ ಮತ್ತು ಪ್ರೊ. ವಂ. ನವೀನ್ ಪಿಂಟೊ ತಿಳಿಸಿದ್ದಾರೆ.

ಎಂ.ಸಿ.ಸಿ ಬ್ಯಾಂಕ್ ಶತಮಾನೋತ್ತರ ದಶಮಾನೋತ್ಸವ ಸಮಾರಂಭದ ಅಂಗವಾಗಿ ಬ್ಯಾಂಕಿನ ಹಂಪನಕಟ್ಟೆಯ ಪ್ರಧಾನ ಕಚೇರಿಯ ಪಿ.ಎಫ್.ಎಕ್ಸ್ ಸಲ್ದನ್ಹಾ ಸ್ಮಾರಕ ಸಭಾಂಗಣದಲ್ಲಿ ಸಮಾಜದ ಅಶಕ್ತ ವರ್ಗದವರಿಗೆ ಸಹಾಯ ಹಸ್ತ ನೀಡುವ ದತ್ತಿನಿಧಿ ವಿತರಣಾ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಬೆಳೆಯುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಷ್ಟ ಕಾಲದಲ್ಲಿ ಜಾತಿ, ಧರ್ಮ ನೋಡದೆ ಸಹಾಯ ಮಾಡುವ ಮನೋಭಾವ ಇನ್ನಷ್ಟು ಮುಂದುವರಿಯಲಿ. ಸಹಾಯ ಪಡೆದವರು, ಭವಿಷ್ಯದಲ್ಲಿ ಇತರರಿಗೆ ನೆರವು ನೀಡುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ವಂ.ನವೀನ್ ಪಿಂಟೊ ತಿಳಿಸಿದ್ದಾರೆ.

ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ  ಮನಪಾ ಮೇಯರ್ ಜಯಾನಂದ ಮಾತನಾಡುತ್ತಾ, ಸಮಾಜದಲ್ಲಿ ದುರ್ಬಲರಿಗೆ ನೆರವು ನೀಡುವ ಮಹತ್ವದ ಕಾರ್ಯದ ಮೂಲಕ ದೇಶಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಮನಪಾ ವಿಪಕ್ಷ  ನಾಯಕ ನವೀನ್ ಆರ್.ಡಿಸೋಜ ಮಾತನಾಡುತ್ತಾ, ಎಂಸಿಸಿ ಬ್ಯಾಂಕ್ ಗ್ರಾಹಕ ಸೇವೆಯ ಜೊತೆ ಸಮಾಜದ ಎಲ್ಲಾ ಜಾತಿ, ಧರ್ಮದ ಆರ್ಥಿಕವಾಗಿ ದುರ್ಬಲರಾದವರಿಗೆ ನೆರವು ನೀಡುವ ಮೂಲಕ ಮಾದರಿಯಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ಎಂಸಿಸಿ ಬ್ಯಾಂಕ್ ವತಿಯಿಂದ ಶಿಕ್ಷಣಕ್ಕಾಗಿ, ವೈದ್ಯಕೀಯ ನೆರವು, ವಿವಾಹ ವೆಚ್ಚದ ಸಹಾಯ ನೆರವು, ಮನೆ ನಿರ್ಮಾಣಕ್ಕಾಗಿ ನೆರವು ನೀಡುವ ಕಾರ್ಯಕ್ರಮದಲ್ಲಿ 90 ಕುಟುಂಬಗಳಿಗೆ 15 ಲಕ್ಷ ರೂ. ಆರ್ಥಿಕ ನೆರವನ್ನು ಫಲಾನುಭವಿಗಳಿಗೆ ಸಮಾರಂಭದಲ್ಲಿ ಅತಿಥಿ, ಗಣ್ಯರು ವಿತರಿಸಿದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಬ್ಯಾಂಕ್ ನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಂಸಿಸಿ ಬ್ಯಾಂಕ್ ಅಧ್ಯಕ್ಷ  ಅನಿಲ್ ಲೋಬೊ ಸಮಾರಂಭದ ಅಧ್ಯಕ್ಷತೆ ವಹಿಸಿ ಸ್ವಾಗತಿಸಿ, ಎಂಸಿಸಿ ಬ್ಯಾಂಕ್ ನ 110 ವರ್ಷಾಚರಣೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಸಮಾರಂಭದಲ್ಲಿ ನಿರ್ದೇಶಕರಾದ ಆಂಡ್ರೂ ಡಿಸೋಜ, ಮಾರ್ಸೆಲ್ ಎಮ್. ಡಿಸೋಜ, ಜೋಸೆಫ್ ಅನಿಲ್‌ ಪತ್ತಾವೊ, ಹೆರಾಲ್ಡ್ ಮೊಂತೇರೊ, ಎಲ್. ರೋಯ್ ಕೆ.ಕ್ರಾಸ್ಟೊ, ಜೆ.ಪಿ.ರೋಡ್ರಿಗಸ್, ಸಿ.ಜಿ.ಪಿಂಟೊ, ಡೇವಿಡ್ ಡಿಸೋಜ, ಸುಶಾಂತ್ ಸಲ್ದಾನ, ರೋಶನ್ ಡಿಸೋಜ, ಡಾ. ಜೆರಾಲ್ಡ್ ಪಿಂಟೊ, ಐರಿನ್ ರೆಬೆಲ್ಲೊ ಡಾ. ಫ್ರೀಡಾ ಡಿಸೋಜ, ಶರ್ಮಿಳಾ ಮಿನೇಜಸ್, ಫೆಲಿಕ್ಸ್ ಡಿಕ್ರೂಜ್, ಅಲ್ವಿನ್ ಪಿ. ಮೊಂತೇರೊ, ಮಹಾ ಪ್ರಬಂಧಕರಾದ ಸುನಿಲ್‌ ಮಿನೇಜಸ್ ಮೊದಲಾದವರು ಉಪಸ್ಥಿತರಿದ್ದರು.

ಬ್ಯಾಂಕ್ ನ ನಿರ್ದೇಶಕ ಡೇವಿಡ್ ಡಿ.ಸೋಜ ಸಹಾಯ ಧನ ವಿತರಣಾ ಕಾರ್ಯಕ್ರಮ ನಿರೂಪಿಸಿದರು. ಎಂಸಿಸಿ ಬ್ಯಾಂಕ್ ಮಹಾಪ್ರಬಂಧಕ ಸುನಿಲ್ ಮಿನೇಜಸ್ ವಂದಿಸಿದರು. ವಯೆಲ್ಲಾ ಬಜ್ಪೆ ಸಭಾ ಕಾರ್ಯಕ್ರಮ ನಿರೂಪಿಸಿದರು.

Similar News