ಬಿಜೆಪಿಯ ಕಲ್ಲುತೂರಾಟದಿಂದ ಬಾಲಕನಿಗೆ ಗಾಯ: ಗುಜರಾತ್ ಆಪ್ ಘಟಕದ ಅಧ್ಯಕ್ಷ ಗೋಪಾಲ್ ಇಟಾಲಿಯ ಆರೋಪ

Update: 2022-11-27 04:50 GMT

ಸೂರತ್: ಇಂದು ಸೂರತ್‌ನಲ್ಲಿ ನಡೆದ ಎಎಪಿ ಚುನಾವಣಾ ಸಮಾವೇಶದ ವೇಳೆ ಕಲ್ಲು ತೂರಾಟ ನಡೆದ ಘಟನೆಗೆ ಆಡಳಿತಾರೂಢ ಬಿಜೆಪಿಯೇ ಕಾರಣ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಗುಜರಾತ್ ಘಟಕದ ಅಧ್ಯಕ್ಷ  ಆರೋಪಿಸಿದ್ದಾರೆ.

ಕತಾರ್ಗಾಮ್ ಕ್ಷೇತ್ರದಲ್ಲಿ ಎಎಪಿ ಸಭೆ ನಡೆಯುತ್ತಿರುವಾಗ ಕಲ್ಲು ತೂರಾಟದಿಂದ ಬಾಲಕನೊಬ್ಬ ಗಾಯಗೊಂಡಿದ್ದಾನೆ ಎಂದು ಎಎಪಿಯ ಗುಜರಾತ್ ಸಂಚಾಲಕ ಗೋಪಾಲ್ ಇಟಾಲಿಯಾ Gopal Italia, AAP's Gujarat convenor ಆರೋಪಿಸಿದ್ದಾರೆ.

ಟ್ವಿಟರ್‌ನಲ್ಲಿ  ಈ ಕುರಿತು ಪ್ರತಿಕ್ರಿಯಿಸಿರುವ  ಇಟಾಲಿಯಾ: " ಕತಾರ್ಗಾಮ್ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭಯದಿಂದಾಗಿ, ಬಿಜೆಪಿ ಗೂಂಡಾಗಳು ಇಂದು ನನ್ನ ಸಾರ್ವಜನಿಕ ಸಭೆಯ ಮೇಲೆ ಕಲ್ಲು ತೂರಾಟ ನಡೆಸಿದರು, ಇದರಲ್ಲಿ ಚಿಕ್ಕ ಬಾಲಕನಿಗೆ ಗಾಯವಾಗಿದೆ’’ ಎಂದರು.

ರಾಜ್ಯದಲ್ಲಿ ಬಿಜೆಪಿ ತನ್ನ 27 ವರ್ಷಗಳ ಆಡಳಿತದಲ್ಲಿ ಒಂದಿಷ್ಟು ಕೆಲಸವನ್ನಾದರೂ ಮಾಡಿದ್ದರೆ ಎಎಪಿ ಸಭೆಗೆ ಕಲ್ಲು ತೂರಬೇಕಾಗುತ್ತಿರಲಿಲ್ಲ ಎಂದರು.

Similar News