×
Ad

ಬದ್ಧತೆ, ಸಮಾಜಮುಖಿ ಚಿಂತನೆಯೊಂದಿಗೆ ಮುನ್ನಡೆಯೋಣ: ಯು.ಟಿ.ಖಾದರ್

ನಡುಪದವು ಆಟೊರಿಕ್ಷಾ ತಂಗುದಾಣ ಉದ್ಘಾಟನೆ

Update: 2022-11-27 18:54 IST

ಕೊಣಾಜೆ: ನಡುಪದವು ಕ್ರಾಸ್ ನಲ್ಲಿ ಶಾಸಕರ ಅನುದಾನದಲ್ಲಿ  ನೂತನವಾಗಿ ನಿರ್ಮಾಣಗೊಂಡಿರುವ ನಡುಪದವು ಆಟೊರಿಕ್ಷಾ ತಂಗುದಾಣದ ಉದ್ಘಾಟನೆಯನ್ನು ಶಾಸಕ ಯು.ಟಿ.ಖಾದರ್ ಅವರು ರವಿವಾರ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ಸೇವಾ ಮನೋಭಾವ, ಬದ್ಧತೆ ಹಾಗೂ ಸಮಾಜಮುಖಿ ಚಿಂತನೆಯೊಂದಿಗೆ ನಾವು ಮುನ್ನಡೆದರೆ ಉತ್ತಮ ಸಮಾಜದ‌ ನಿರ್ಮಾಣ ಸಾಧ್ಯವಾಗುತ್ತದೆ. ಸಮಾಜದ ಬೆಳವಣಿಗೆಯಲ್ಲಿ ಆಟೊ ಚಾಲಕರ ಕೊಡುಗೆಯೂ ಅಪಾರವಾದುದು. ಎಷ್ಟೋ  ತುರ್ತು ಸಂದರ್ಭಗಳಲ್ಲಿ ಅಟೋ ಚಾಲಕರು ಆಪತ್ಬಾಂಧವರಾಗುವು ದನ್ನು ಅನೇಕ ಕಡೆಗಳಲ್ಲಿ ನೋಡಿದ್ದೇವೆ.‌ ನೂತನ ರಿಕ್ಷಾ ತಂಗುದಾಣ ನಿರ್ಮಾಣವಾಗುವುದರ ಮೂಲಕ ಈ ಭಾಗದ ರಿಕ್ಷಾ ಚಾಲಕ  ಮತ್ತು ಮಾಲಕರ ಬೇಡಿಕೆ ಈಡೇರಿದಂತಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕೊಣಾಜೆ ಗ್ರಾಮ ಪಂ. ಅಧ್ಯಕ್ಷರಾದ ಚಂಚಲಾಕ್ಷಿ, ಕೊಣಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ದೇವಣ್ಣ ಶೆಟ್ಟಿ ಕೊಣಾಜೆ,  ತಾಲ್ಲೂಕು ಪಂ. ಮಾಜಿ ಅಧ್ಯಕ್ಷರಾದ ಮಹಮ್ಮದ್ ಮೋನು, ಆಟೊ ಚಾಲಕರ ಸಂಘದ ಅಧ್ಯಕ್ಷರಾದ  ಅಬ್ದುಲ್ ಅಝೀಝ್ ರೆಂಜಾಪು, ಮುಖಂಡರಾದ ಇಬ್ರಾಹಿಂ ಹಾಜಿ ನಡುಪದವು, ಟಿ.ಎಸ್.ಅಬ್ದುಲ್ಲಾ ಸಾಮಣಿಗೆ,  ನಡುಪದವು ಉಮ್ಮರ್ ಜುಮಾ ಮಸೀದಿಯ ಅಧ್ಯ‌ಕ್ಷರಾದ  ನಾಸೀರ್ ನಡುಪದವು, ಮುಡಿಪು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಜಲೀಲ್ ಮೋಂಟುಗೋಳಿ, ಬಾಳೆಪುಣಿ ಪ.ಸದಸ್ಯರಾದ ಸಿ.ಎಂ.ಶರೀಫ್ ಚೆಂಬೆತೋಟ, ಕೊಣಾಜೆ ಪ. ಮಾಜಿ ಸದಸ್ಯೆ  ಮುತ್ತು ಶೆಟ್ಟಿ ಕೊಣಾಜೆ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎ.ಕೆ.ರಹಿಮಾನ್, ಪುತ್ತು ಹಾಜಿ, ಟಿ.ಎಸ್.ಖಾದರ್ ಹಾಜಿ, ಜಿಲ್ಲಾ ಕಾಂಗ್ರೆಸ್ ಸದಸ್ಯರಾದ ಅಬ್ದುಲ್ ರಹಿಮಾನ್ ಕೋಡಿಜಾಲ್, ಉದ್ಯಮಿ ಕೆ.ಕೆ‌.ನಾಸೀರ್ ಕೊಣಾಜೆಕಾರ್ಸ್ , ಕೊಣಾಜೆ ಪಂಚಾಯತ್ ಸದಸ್ಯರಾದ ಅಚ್ಯುತ ಗಟ್ಟಿ, ಇಕ್ಬಾಲ್ ಬರುವ, ಇಕ್ಬಾಲ್ ಕೊಣಾಜೆ, ಪ್ರೇಮ್ ಅಸೈಗೋಳಿ, ರವಿ, ಮತ್ತು ಪ್ರಮುಖರಾದ ಸಲೀಂ ಮೆಗಾ, ಹಾರೀಸ್ ಪಿ.ಎ, ಚಂದ್ರಹಾಸ್ ನಡುಪದವು, ಶಾಫಿ ನಡುಪದವು, ವಸಂತ್ ಕಾಟುಕೋಡಿ  ಮೊದಲಾದವರು  ಉಪಸ್ಥಿತರಿದ್ದರು.

ಕೊಣಾಜೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ನಝರ್ ಷಾ ಪಟ್ಟೋರಿ ಸ್ವಾಗತಿಸಿ, ಕಾರ್ಯಕ್ರಮ‌ ನಿರೂಪಿಸಿದರು.

Similar News