ಉಳ್ಳಾಲ: ಬಿಐಟಿ, ಬೀಡ್ಸ್, ಬಿಐಇಎಸ್‌ನಿಂದ ಬೀಚ್ ಸ್ವಚ್ಛತಾ ಕಾರ್ಯಕ್ರಮ

Update: 2022-11-27 18:11 GMT

ಮಂಗಳೂರು, ನ.27: ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ), ಬೀಡ್ಸ್ ಮತ್ತು ಬಿಐಇಎಸ್ ವತಿಯಿಂದ ಕೋಸ್ಟಲ್ ಕ್ಲೀನ್ ಅಪ್ ದಿನಾಚರಣೆ ಪ್ರಯುಕ್ತ ಉಳ್ಳಾಲ ಬೀಚ್‌ನಲ್ಲಿಂದು ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಬಿಐಟಿ ಪ್ರಾಂಶುಪಾಲ ಡಾ.ಎಸ್.ಐ. ಮಂಜೂರ್ ಬಾಷಾ ಉದ್ಘಾಟಿಸಿದರು.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಬಿಐಟಿ ಇಂಜಿನಿಯರಿಂಗ್, ಪಾಲಿಟೆಕ್ನಿಕ್, ಬೀಡ್ಸ್, ಬಿಐಇಎಸ್ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಬಿಐಟಿ ವಿವಿಧ ವಿಭಾಗಗಳ ಮುಖ್ಯಸ್ಥರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳ ಜೊತೆಗೂಡಿದರು.

ದೈಹಿಕ ಶಿಕ್ಷಣ ನಿರ್ದೇಶಕ, ಸ್ವಚ್ಛತಾ ಕಾರ್ಯಕ್ರಮದ ಸಂಯೋಜಕ ಸಫ್ವಾನ್ ಸ್ವಾಗತಿಸಿದರು.

Similar News