ರಶ್ಯ ಸೇನೆಯ ಭೀಕರ ಶೆಲ್ ದಾಳಿ: ಖೆರ್ಸನ್ ನಗರದಿಂದ ಸಾವಿರಾರು ನಾಗರಿಕರ ಪಲಾಯನ

Update: 2022-11-27 18:52 GMT

ಖೆರ್ಸನ್,ನ.27: ರಶ್ಯ ಆಕ್ರಮಣದಿಂದ ವಿಮೋಚನೆಗೊಂಡಿರುವ ಉಕ್ರೇನ್ನ ಖೆರ್ಸನ್ ನಗರ ಮೇಲೆ ರಶ್ಯನ್ ಪಡೆಗಳು ಭೀಕರ ಶೆಲ್ದಾಳಿಯನು ಮುಂದುವರಿಸಿರುವುದರಿಂದ ಭಯಭೀತರಾದ ನಾಗರಿಕರು ನಗರವನ್ನು ತರೆದು ಪಲಾಯನಗೈಯುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

ನಾಗರಿಕರು ಟ್ರಕ್ಗಳು ಹಾಗೂ ಕಾರುಗಳಲ್ಲಿ ನಗರವನ್ನು ತೊರೆಯುತ್ತಿದ್ದಾರೆ , ಸಾಕುಪ್ರಾಣಿಗಳು ಹಾಗೂ ತಮ್ಮ ಸೊತ್ತುಗಳೊಂದಿಗೆ ನಗರವನ್ನು ತ್ಯಜಿಸುವ ನಾಗರಿಕರಿರುವ ವಾಹನಗಳ ಸಾಲುಗಳ ನಗರದ ಹೊರವಲಯದಲ್ಲಿ ಒಂದು ಕಿ.ಮೀ. ಗೂ ಅಧಿಕ ದೂರದವರೆಗೆ ಸಾಲುಗಟ್ಟಿ ನಿಂತಿರುವುದು ಕಂಡುಬಂದಿರುವುದಾಗಿ ಎಂದು ವರದಿಗಳು ತಿಳಿಸಿವೆ.
 ಖೆರ್ಸನ್ನಿಂದ ಹಿಂದೆ ಸರಿದ ಬಳಿಕ ರಶ್ಯನ್ ಪಡೆಗಳು , ಆ ನಗರದ ಮೇಲೆ ತಮ್ಮ ದಾಳಿಯನ್ನು ತೀವ್ರಗೊಳಿಸಿವೆ. ಶೆಲ್ ದಾಳಿಯನ್ನು ತೀವ್ರಗೊಳಿಸಿರುವ ರಶ್ಯನ್ ಸೇನೆಯು ಫಿರಂಗಿಗಳು ಹಾಗೂ ಡ್ರೋನ್ ದಾಳಿಯನ್ನು ನಿರಂತರವಾಗಿ ನಡೆಸುತ್ತಿವೆ.

ಈ ಮಧ್ಯೆ ರಾಜಧಾನಿ ಕೀವ್ನಲ್ಲಿ ರವಿವಾರ ನಡೆದ ಆಹಾರ ಭದ್ರತಾ ಶೃಂಗಸಭೆಯಲ್ಲಿ ಬೆಲ್ಜಿಯಂ, ಪೊಲ್ಯಾಂಡ್ ಹಾಗೂ ಲಿಥುವಾನಿಯಾ ದೇಶಗಳ ಪ್ರಧಾನಿಗಳು ಹಾಜರಾಗಿದ್ದರು. ಉಕ್ರೇನ್ನಿಂದ ವಿಶ್ವದ ಇತರ ರಾಷ್ಟ್ರಗಳಿಗೆ ಕೃಷಿ ಉತ್ಪನ್ನಗಳ ರಫ್ತಿನ ಬಗ್ಗೆ ಚರ್ಚಿಸಲು ಈ ಸಭೆಯನ್ನು ಆಯೋಜಿಸಲಾಗಿತ್ತು. ಅನೇಕ ದೇಶಗಳ ವರಿಷ್ಠರ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದರು. ಈ ಶೃಂಗಸಭೆಗೆ 20ಕ್ಕೂ ಅಧಿಕ ರಾಷ್ಟ್ರಗಳು ಬೆಂಬಲ ನೀಡಿವೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತಿಳಿಸಿದ್ದಾರೆ.

ಟರ್ಕಿ ಹಾಗೂ ವಿಶ್ವಸಂಸ್ಥೆಯ ಮಧ್ಯಸ್ಥಿಕೆಯ ನಡುವೆ ನಡೆದ ಒಪ್ಪಂದದಿಂದಾಗಿ ಕಪ್ಪು ಸಮುದ್ರದ ಮೂಲಕ ಉಕ್ರೇನ್ನ ದವಸಧಾನ್ಯಗಳನ್ನು ಸುರಕ್ಷಿತವಾಗಿ ರಫ್ತು ಮಾಡಲು ಅವಕಾಶ ನೀಡಿದೆ. ‘‘ಉಕ್ರೇನ್ನಿಂದ ಆಹಾರ ಧಾನ್ಯಗಳ ರಫ್ತಿಗಾಗಿ 60 ಹಡಗುಗಳನ್ನು ಸಜ್ಜುಗೊಳಿಸಲಾಗುತ್ತಿದೆ. ಆಹಾರ ಬಿಕ್ಕಟ್ಟಿನಿಂದ ಬಳಲುತ್ತಿರುವ ಬಹುತೇಕ ರಾಷ್ಟ್ರಗಳಿಗೆ ಉಕ್ರೇನ್ನ ಕೃಷಿ ಉತ್ಪನ್ನಗಳನ್ನು ನಾವು ಕಳುಹಿಸುತ್ತಿದ್ದೇವೆ. ಹಸಿವನ್ನು ಅಸ್ತ್ರವಾಗಿ ಬಳಸಬಾರದೆಂಬುದು ಉಕ್ರೇನ್ ನಿಲುವಾಗಿದೆ’’ ಎಂದು ಝೆಲೆನ್ಸ್ಕಿ ತಿಳಿಸಿದ್ದಾರೆ.

Similar News