ಗಾಸಿಪ್ ಬಾಂಬ್ ಗಳನ್ನು ಜನರೇ ಪತ್ತೆ ಹಚ್ಚಬೇಕಿದೆ: ಕೆ.ಅಶ್ರಫ್

Update: 2022-11-29 07:50 GMT

ಮಂಗಳೂರು, ನ.29: ಇತ್ತೀಚೆಗೆ ನಗರದಲ್ಲಿ ಸಂಭವಿಸಿದ ಕುಕ್ಕರ್ ಸ್ಫೋಟದ ಘಟನೆಯ ಸುದ್ದಿಯ ನಂತರ ಸರಕಾರದ ಉನ್ನತ ಅಧಿಕಾರಿಗಳು ವಿಧಿ ವಿಜ್ಞಾನ ಇಲಾಖೆಯ ಪ್ರಾಥಮಿಕ ವರದಿಗಿಂತ ವೇಗವಾಗಿ ಗಾಸಿಪ್‌ಗಳು ಹರಡುತ್ತಿದ್ದು, ಈ ಬಗ್ಗೆ ಜನತೆ ಎಚ್ಚೆತ್ತುಕೊಳ್ಳಬೇಕು ಎಂದು ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಹೇಳಿದ್ದಾರೆ.

ಘಟನೆಗೆ ಸಂಬಂಧಿಸಿ ಜನರಲ್ಲಿ ಆತಂಕ ಮೂಡಿಸುವ ಅದೆಷ್ಟೋ ಹೇಳಿಕೆಗಳನ್ನು ಹರಡಲಾಗಿತ್ತು. ಒಂದು ವಾರದ ನಂತರ ನಗರದ ಉನ್ನತ ಪೊಲೀಸು ಅಧಿಕಾರಿಗಳು ಆರೋಪಿಯ ತನಿಖೆ ಇನ್ನಷ್ಟೇ ಆಗಬೇಕಿದೆ ಎಂದು ಹೇಳಿಕೆ ನೀಡಿದ್ದಾರೆ. ಈ ಮಧ್ಯೆ ಜಿಲ್ಲೆಯ,ರಾಜ್ಯದ ಮಾಧ್ಯಮಗಳು ಈ ಘಟನೆಗೆ ಸಂಬಂಧಿಸಿ ತರಾವರಿ ಸುದ್ದಿಗಳನ್ನು ಪ್ರಕಟಿಸಿ, ಇಡೀ ಜಿಲ್ಲೆ ಮತ್ತು ರಾಜ್ಯದ ವಿವಿಧ ಭಾಗಗಳಲ್ಲಿ ವಿದ್ವಂಸಕ ಕೃತ್ಯದ ಷಡ್ಯಂತ್ರ ಉದ್ದೇಶಿಸಲಾಗಿತ್ತು. ನಗರದ ಪ್ರಮುಖ ಆರಾಧನಾ ಕೇಂದ್ರವೂ ಕೂಡಾ ಸ್ಫೋಟದ ಉದ್ದೇಶಿತ ಗುರಿಯಾಗಿತ್ತು ಎಂಬಂತೆ,ಅದೆಷ್ಟೋ ಗಾಸಿಪ್ ಗಳನ್ನು ಪ್ರಚಾರ ಪಡಿಸಿದ್ದಾರೆ. ಇಂತಹ ಗಾಸಿಪ್ ಗಳ ಮೂಲಗಳನ್ನು ಜನರೇ ಪತೆತಿ ಹಚ್ಚಿ ಕ್ರಮ ಕೈಗೊಳ್ಳಬೇಕಿದೆ. ಇಂತಹ ಗಾಸಿಪ್ ಸ್ಫೋಟದ ಮೂಲಕ ಜಿಲ್ಲೆಯ ಮತ್ತು ರಾಜ್ಯದ ನೈಜ ಸಮಸ್ಯೆಯನ್ನು ಉದ್ದೇಶ ಪೂರ್ವಕವಾಗಿ ಮರೆ ಮಾಚಲು ಪ್ರಯತ್ನಿಸಲಾಗಿದೆ. ಇದರ ಫಲಿತಾಂಶದ ಗತಿಯನ್ನು ಅರಿಯಲು ಕಾಯಬೇಕಿದೆ. ಈ ಬಗ್ಗೆ ತನಿಖೆ ಆಗಲಿ ಎಂದು ಅವರು ಪತ್ರಿಕಾ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.

Similar News