ಮಣಿಪಾಲ: ನ.30ರಂದು ಮೂರು ಕಿರುನಾಟಕಗಳ ಪ್ರದರ್ಶನ

Update: 2022-11-29 14:25 GMT

ಉಡುಪಿ, ನ.29: ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಆಶ್ರಯದಲ್ಲಿ ಸಾದತ್ ಹಸನ್ ಮಾಂಟೊ, ಹೆರಾಲ್ಡ್ ಪಿಂಟರ್ ಮತ್ತು ಸುರೇಂದ್ರ ವರ್ಮಾರ ಮೂರು ಕಿರುನಾಟಕಗಳ ಪ್ರದರ್ಶನ  ನ.30ರ ಬುಧವಾರ ಸಂಜೆ 6 ಗಂಟೆಗೆ ನಡೆಯಲಿದೆ.

ಉಪರ್ ನೀಚೆ ಔರ್ ದರ್ಮಿಯಾನ್ (ಸಾದತ್ ಹಸನ್ ಮಂಟೋ), ವಿಕ್ಟೋರಿಯಾ ಸ್ಟೇಷನ್ (ಹೆರಾಲ್ಡ್ ಪಿಂಟರ್), ನೀಂದ್ ಕ್ಯೂಂ ರಾತ್ ಭರ್ ನಹಿ ಆತಿ (ಸುರೇಂದ್ರ ವರ್ಮ) ಎಂಬ ಮೂರು ನಾಟಕಗಳನ್ನು ಸಂಸ್ಥೆಯ ಎರಡನೇ ವರ್ಷದ ಬಿಎ ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ.

ನಾಟಕಗಳು ಮಣಿಪಾಲದ ಮಾಹೆಯ ಪ್ಲಾಂಟೇರಿಯಂ ಸಂಕೀರ್ಣದಲ್ಲಿರುವ ಗಂಗೂಬಾಯಿ ಹಾನಗಲ್ ಆಡಿಟೋರಿಯಂನಲ್ಲಿ ನಡೆಯಲಿದೆ ಎಂದು ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ತಿಳಿಸಿದ್ದಾರೆ. 

ಆಧುನಿಕ ಜೀವನದ ಸಂಕೀರ್ಣತೆಗಳ ಮೇಲೆ ಕೇಂದ್ರೀತವಾಗಿರುವ ಈ ಮೂರು ನಾಟಕಗಳನ್ನು ಅಭಿನವ್ ಗ್ರೋವರ್ ನಿರ್ದೇಶಿಸಿದ್ದು, ವೆಲಿಕಾ, ಚಿನ್ಮಯಿ ಬಾಳ್ಕರ್, ಆಲಿಸ್ ಚೌಹಾಣ್, ಶ್ರವಣ್ ಬಾಸ್ರಿ, ಆಕರ್ಷಿಕಾ ಸಿಂಗ್, ಸಾತ್ವಿಕ್ ಜೋಶಿ ಮತ್ತು ಸುಹಾನಿ ಅಭಿನಿಯಿಸುತ್ತಿದ್ದಾರೆ. ಶ್ರುತಿ ಬಂಗೇರ ಅವರು ಬೆಳಕು ಮತ್ತು ಸಂಪದ ಭಾಗವತ್ ಸಂಗೀತವನ್ನು ನಿರ್ವಹಿಸಲಿದ್ದಾರೆ. ಆಸಕ್ತ ರೆಲ್ಲರಿಗೂ ನಾಟಕಕ್ಕೆ ಮುಕ್ತ ಪ್ರವೇಶವಿದೆ ಎಂದು ಪ್ರಕಟಣೆ ತಿಳಿಸಿದೆ. 

Similar News