18,331 ಹುದ್ದೆಗಳಿಗೆ 11 ಲಕ್ಷ ಅರ್ಜಿ ಸ್ವೀಕರಿಸಿದ ಮಹಾರಾಷ್ಟ್ರ ಪೊಲೀಸ್

Update: 2022-11-29 17:56 GMT

ಗಾಂಧಿನಗರ, ನ. 29:  ರಾಜ್ಯ ಮೀಸಲು ಪೊಲೀಸ್ ಪಡೆಯ 18,331 ಕಾನ್ಸ್ಟೆಬಲ್, ಚಾಲಕರ ಹುದ್ದೆಗಳಿಗೆ 11 ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ಮಹಾರಾಷ್ಟ್ರ ಪೊಲೀಸ್ (Maharashtra Police)ಸ್ವೀಕರಿಸಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. 

ಈ ಹುದ್ದೆಗಳ ಅರ್ಜಿಗಳನ್ನು ಭರ್ತಿ ಮಾಡಲು ದೊಡ್ಡ ಸಂಖ್ಯೆಯ ಆಕಾಂಕ್ಷಿಗಳು ಸರಕಾರದ ಪೋರ್ಟಲ್ ಅನ್ನು ಲಾಗ್ ಆನ್ ಮಾಡಲು ಪ್ರಯತ್ನಿಸಿರುವುದರಿಂದ ವೆಬ್ಸೈಟ್ ನಿಧಾನವಾಗುವಂತಹ ಸಮಸ್ಯೆಗಳು ತಲೆದೋರಿದವು ಎಂದು ಅವರು ತಿಳಿಸಿದ್ದಾರೆ. 

ಈ ಹುದ್ದೆಗಳಿಗೆ ನವೆಂಬರ್ 9ರಂದು ಆನ್ಲೈನ್ ಅರ್ಜಿ ಕರೆಯಲಾಗಿತ್ತು. ಬುಧವಾರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿತ್ತು ಎಂದು ಅವರು ತಿಳಿಸಿದ್ದಾರೆ. 

‘ಸೋಮವಾರ ಅಪರಾಹ್ನದ ವರೆಗೆ ನಾವು 10.74 ಲಕ್ಷ ಅರ್ಜಿಗಳನ್ನು ಸ್ವೀಕರಿಸಿದ್ದೇವೆ. ಆದರೆ, ಈಗ ನಾವು 11 ಲಕ್ಷಕ್ಕೂ ಅಧಿಕ ಅರ್ಜಿಗಳನ್ನು ಸ್ವೀಕರಿಸಿದ್ದೇವೆ ಎಂದು ಹೇಳಬಹುದುʼ ಎಂದು ಅವರು ತಿಳಿಸಿದ್ದಾರೆ. 
‘ಅರ್ಜಿ ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬರುವ ಸಾಧ್ಯತೆ ಇದೆʼ ಎಂದು ಅವರು ತಿಳಿಸಿದ್ದಾರೆ. 

Similar News