ಸಾಮಾಜಿಕ ಜಾಲತಾಣದಲ್ಲಿ ಬೀಫ್ ಬಿರಿಯಾನಿ ವೀಡಿಯೊ ವೈರಲ್ | ಮುಡಿಪು ಹೋಟೆಲ್ ಗೆ ಪೊಲೀಸ್ ದಾಳಿ: ಓರ್ವ ವಶಕ್ಕೆ

Update: 2022-11-30 07:37 GMT

ಕೊಣಾಜೆ, ನ.30: ಹೋಟೆಲ್ ನಲ್ಲಿ ಬೀಫ್ ಬಿರಿಯಾನಿ ಇದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಹರಿದಾಡುತ್ತಿದ್ದ ಹಿನ್ನೆಲೆಯಲ್ಲಿ ಮುಡಿಪು ಸಮೀಪದ ತಾಜ್ ಕ್ಯಾಂಟೀನ್ ಎಂಬ ಹೋಟೆಲಿಗೆ ಕೊಣಾಜೆ ಪೊಲೀಸರು ಮಂಗಳವಾರ ದಾಳಿ ನಡೆಸಿದ್ದಾರೆ.

ಪರಿಶೀಲನೆಯ ವೇಳೆ ದನದ ಮಾಂಸದ ಬಿರಿಯಾನಿ ಮತ್ತು ಮಾಂಸ ಪತ್ತೆಯಾಗಿದೆ ಎನ್ನಲಾಗಿದೆ. ಈ ಹೋಟೆಲ್ ಮಾಲಕ ಹುಸೈನ್ ಎಂಬವರನ್ನು ಕೊಣಾಜೆ ಪೊಲಿಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಸ್ಥಳೀಯ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ನೀಡಿದ ಮಾಹಿತಿಯಂತೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದು, ಹಿಂಜಾವೇ ಕಾರ್ಯಕರ್ತರು ಕೂಡಾ ಪೊಲೀಸರ ಜೊತೆಗಿದ್ದರು ಎಂದು ತಿಳಿದುಬಂದಿದೆ.

Similar News