ಸುಪ್ರೀಂ ಕೋರ್ಟ್ ಆದೇಶ ಧಿಕ್ಕರಿಸಿ BS-III ವಾಹನ ಮಾರಾಟ: ಅಶೋಕ್ ಲೇಲ್ಯಾಂಡ್ ವಿರುದ್ಧ ಈಡಿ ತನಿಖೆ

Update: 2022-11-30 07:16 GMT

ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿ BS-III ವಾಹನದ ಮಾರಾಟದಲ್ಲಿ ಭಾರತದ ಪ್ರಮುಖ ವಾಣಿಜ್ಯ ವಾಹನ ತಯಾರಕ ಕಂಪೆನಿ ಅಶೋಕ್ ಲೇಲ್ಯಾಂಡ್ Ashok Leyland ಪಾತ್ರದ ಬಗ್ಗೆ ಜಾರಿ ನಿರ್ದೇಶನಾಲಯ(ಈಡಿ)  ತನಿಖೆ ನಡೆಸುತ್ತಿದೆ ಎಂದು NDTV ವರದಿ ಮಾಡಿದೆ.

ಅಶೋಕ್ ಲೇಲ್ಯಾಂಡ್, ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಮಾಲಿನ್ಯ-ವಿರೋಧಿ ಮಾನದಂಡಗಳನ್ನು ಉಲ್ಲಂಘಿಸುವ ಟ್ರಕ್‌ಗಳ ಮಾರಾಟಕ್ಕಾಗಿ ಕೇಂದ್ರೀಯ ಸಂಸ್ಥೆ ಜಾರಿ ನಿರ್ದೇಶನಾಲಯ ED ಯಿಂದ ತನಿಖೆಗೆ ಒಳಪಟ್ಟಿದೆ.

ಟ್ರಕ್‌ಗಳನ್ನು ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ ಮಾಜಿ ಶಾಸಕ ಜೆ.ಸಿ. ಪ್ರಭಾಕರ್ ಹಾಗೂ  ಅವರ ಕುಟುಂಬ ಸದಸ್ಯರು ಮತ್ತು ಸಹಚರರು ಖರೀದಿಸಿದ್ದಾರೆ. ಅವರನ್ನು ಈಗಾಗಲೇ ಹಲವಾರು ಬಾರಿ ಪ್ರಶ್ನಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಅವರ ಕಂಪನಿಗಳ  22.1 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಲಾಗಿದೆ.

Similar News