ಸುರತ್ಕಲ್ ಟೋಲ್ ಗೇಟ್ ನಲ್ಲಿ ಟೋಲ್ ಶುಲ್ಕ ಸಂಗ್ರಹ ಸ್ಥಗಿತ: ಪಟಾಕಿ ಸಿಡಿಸಿ ಸಂಭ್ರಮಾಚರಿಸಿದ ಹೋರಾಟ ಸಮಿತಿ

Update: 2022-12-01 04:13 GMT

ಸುರತ್ಕಲ್: ಇಲ್ಲಿನ ಎನ್ಐಟಿಕೆ ಟೋಲ್ ಗೇಟ್ ನಲ್ಲಿ ನ.30ರಂದು ಮಧ್ಯರಾತ್ರಿಯಿಂದ ಟೋಲ್ ಶುಲ್ಕ ಸಂಗ್ರಹ ನಿಲ್ಲಿಸಿದ್ದು, ಇದು ಹೋರಾಟಕ್ಕೆ ಸಿಕ್ಕಿದ ಜಯ ಎಂದು ಹೋರಾಟ ಸಮಿತಿಯ ಮುಖಂಡರು ತಿಳಿಸಿದ್ದಾರೆ.

ಟೋಲ್ ಗೇಟ್‌ನಲ್ಲಿ ಟೋಲ್ ಸಂಗ್ರಹ ನಿಲ್ಲಿಸಿದ ಕ್ಷಣವೇ ಹೋರಾಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು. ಹೋರಾಟ ಸಮಿತಿಯ ಮುಖಂಡರು ಕೇಕ್ ಗಳನ್ನು ಕತ್ತರಿಸುವ ಮೂಲಕ ಸಂಭ್ರಮಾಚರಣೆಯನ್ನು ಆಚರಿಸಿದರು.

ಹೋರಾಟ ಸಮಿತಿಯ ಮುಖಂಡರು, ಕಾರ್ಯಕರ್ತರು ಹಾಗೂ ದ.ಕ. ಮತ್ತು ಉಡುಪಿ ಜಿಲ್ಲೆಯ ಸಮಾನ ಮನಸ್ಕ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.

ಸಂಭ್ರಮಾಚರಣೆಯ ವೇಳೆ  ಹೋರಾಟ ಸಮಿತಿಗೆ‌ ಜಯಘೋಷಗಳನ್ನು ಕೂಗಿದರು. ಚಂಡೆಯ ವಾದನ, ಹಾಡುಗಳಿಗೆ ಕುಣಿದು ಕುಪ್ಪಳಿಸಿದ ಕಾರ್ಯಕರ್ತರು, ಟೋಲ್ ಗೇಟ್ ಬಳಿ ಹಾಕಲಾಗಿದ್ದ ಧರಣಿ‌ ಮಂಟಪದ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜೊತೆಗೆ ಅವಿಭಜಿತ ದ.ಕ. ಜಿಲ್ಲೆಯ ಸಂಸದರು, ಶಾಸಕರಿಗೆ ದಿಕ್ಕಾರ ಕೂಗಿದರು.

ಈ ವೇಳೆ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಇದು ತುಳುನಾಡಿನ ಒಗ್ಗಟ್ಟಿಗೆ ಸಂದ ಜಯ. ಧರಣಿಯಲ್ಲಿ ಭಾಗವಹಿಸಿದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.

Similar News