ಡಿ.5ರಂದು ʼಹರೇಕಳ ಗ್ರಾಮ ಸೌಧʼ ಲೋಕಾರ್ಪಣೆ; ಮಾಜಿ ಸಿಎಂ ಸಿದ್ದರಾಮಯ್ಯ ಉದ್ಘಾಟನೆ

Update: 2022-12-01 12:46 GMT

ಕೊಣಾಜೆ: ಉಳ್ಳಾಲ ತಾಲೂಕಿನ ಹರೇಕಳ ಗ್ರಾಮ ಪಂ. ಒಳಗೊಂಡಂತೆ ವಿವಿಧ ಕಚೇರಿಗಳನ್ನೊಳಗೊಂಡ ನೂತನ ಕಚೇರಿ ಕಟ್ಟಡ "ಹರೇಕಳ ಗ್ರಾಮ ಸೌಧ" ಡಿ. 5ರಂದು ಸಂಜೆ 4 ಕ್ಕೆ ಲೋಕಾರ್ಪಣೆಗೊಳ್ಳಲಿದ್ದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ ಎಂದು ಹರೇಕಳ ಗ್ರಾಮ ಪಂ. ಅಧ್ಯಕ್ಷ ಬದ್ರುದ್ದೀನ್ ಹರೇಕಳ ಹೇಳಿದರು.

ಹರೇಕಳ ಗ್ರಾ.ಪಂ. ಸಭಾಂಗಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಣ್ಣ  ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದ ಗ್ರಾಮ ಪಂ. ಆಡಳಿತ ಕಟ್ಟಡ ಶಿಥಿಲಗೊಂಡ ಕಾರಣ ಬಾವಲುಗುಳಿ ಸಮೀಪದ ಸರಕಾರಿ ಸ್ಥಳದಲ್ಲಿಯೇ ಪಂಚಾಯಿತಿ ಕಚೇರಿ ನೂತನ ಕಟ್ಟಡವನ್ನು ಸರ್ವಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ. ಮಾದರಿ ಕಟ್ಟಡವಾಗಿದ್ದು ಮಿನಿ ವಿಧಾನಸೌಧದ ರೀತಿಯಲ್ಲಿ ಕಾಣುತ್ತಿದೆ. ಕಟ್ಟಡಕ್ಕೆ ದಾನಿಗಳ ಸಹಕಾರ ಸಿಕ್ಕಿದ್ದರಿಂದಲೇ ಇಂತಹ ಬೃಹತ್ ಕಟ್ಟಡ ನಿರ್ಮಾಣ ಸಾಧ್ಯವಾಗಿದೆ ಎಂದರು.

ಸಚಿವ ವಿ. ಸುನಿಲ್ ಕುಮಾರ್ ಅವರಿಂದ ಮಹಾತ್ಮಾಗಾಂಧಿ ಸಭಾಂಗಣ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಡಿಜಿಟಲ್ ಗ್ರಂಥಾಲಯ, ಸಚಿವ ಎಸ್. ಅಂಗರ ಅಮೃತ ಉದ್ಯಾನವನ ಉದ್ಘಾಟಿಸಲಿದ್ದು ಶಾಸಕ ಯು.ಟಿ. ಖಾದರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ರಾಜಕೀಯ ಮುಖಂಡರಾದ ಸಂಸದ ನಳಿನ್ ಕುಮಾರ್ ಕಟೀಲು, ರಾಜ್ಯಸಭೆಯ ಸಂಸದ ಡಾ. ಡಿ. ವೀರೇಂದ್ರ ಹೆಗ್ಗಡೆ, ವಿಧಾನ ಪರಿಷತ್ ಶಾಸಕರುಗಳಾದ ಬಿ.ಕೆ. ಹರಿಪ್ರಸಾದ್, ಕೆ. ಹರೀಶ್ ಕುಮಾರ್, ಎಸ್. ಎಲ್. ಭೋಜೇಗೌಡ, ಡಾ. ಮಂಜುನಾಥ ಭಂಡಾರಿ, ಅಬ್ದುಲ್ ಜಬ್ಬಾರ್, ಬಿ.ಎಮ್. ಫಾರೂಕ್, ಆಯನೂರು ಮಂಜುನಾಥ್, ಪ್ರತಾಪ್ ಸಿಂಹ ನಾಯಕ್, ಯು.ಬಿ. ವೆಂಕಟೇಶ್ ಹಾಗೂ ವಿಶೇಷ ಆಹ್ವಾನಿತರಾಗಿ ದ.ಕ. ಜಿಲ್ಲಾ ಪಂಚಾಯಿತಿ ಸಿಇಒ ಡಾ. ಕುಮಾರ್, ಉಳ್ಳಾಲ ತಾಲೂಕು ಸಿಇಒ ರಾಜಣ್ಣ, ಪದ್ಮಶ್ರೀ ಪುರಸ್ಕೃತ ಹಾಜಬ್ಬ ಹರೇಕಳ, ಶ್ಯಾಮಿಲಿ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ನಾಡೋಜ ಡಾ. ಜಿ. ಶಂಕರ್, ಯೆನೆಪೋಯ ಪರಿಗಣಿತ ವಿವಿ ಸಹ ಕುಲಾಧಿಪತಿ ಫರ್ಹಾದ್ ಯೆನೆಪೊಯ, ಉದ್ಯಮಿ ಬರಕ ಓವರ್ ಸೀಸ್ ಮುಖ್ಯ ಕಾರ್ಯ ನಿರ್ವಾಹಕ ನಶಲ್ ಎಂ. ಸಲೀಂ ಭಾಗವಹಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಕಲ್ಯಾಣಿ, ಸದಸ್ಯರುಗಳಾದ ಅಬ್ದುಲ್ ಸತ್ತಾರ್, ಅಬೂಬಕ್ಕರ್ ಸಿದ್ದಿಕ್, ಮಹಮ್ಮದ್ ಹನೀಫ್, ಅಬ್ದುಲ್ ಮಜೀದ್, ಗುಲಾಬಿ, ಪೂವಕ್ಕ,  ಜಯಂತಿ,  ರೆಹನಾ ನಝೀರ್, ರೆಹನಾ ಮೊಹಮ್ಮದ್,  ಪ್ರಿಯಾ ಪಾಯಸ್ ಹಾಗೂ ಅನಿತಾ ಡಿಸೋಜ ಉಪಸ್ಥಿತರಿದ್ದರು.

Similar News